ಗರ್ಭಕಂಠದ ಕ್ಯಾನ್ಸರ್ ಅರಿವು ಅಗತ್ಯ: ಡಾ. ರೇಖಾ ವಿ.ಎಸ್‌

Cervical cancer awareness is essential: Dr. Rekha VS

ಗರ್ಭಕಂಠದ ಕ್ಯಾನ್ಸರ್ ಅರಿವು ಅಗತ್ಯ: ಡಾ. ರೇಖಾ ವಿ.ಎಸ್‌. 

ಕೊಪ್ಪಳ 11: ನಗರದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಎನ್‌.ಎಸ್‌.ಎಸ್ ಘಟಕ ಮತ್ತು ಪ್ರಾಣಿಶಾಸ್ತ್ರ ವಿಭಾಗದಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕೆ.ಸ್‌. ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ. ರೇಖಾ ವಿ.ಎಸ್‌. ಅವರು ಆಗಮಿಸಿ ಗರ್ಭಕಂಠದ ಕ್ಯಾನ್ಸರ್ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ಗರ್ಭಕಂಠ ಕ್ಯಾನ್ಸರಿನ ಲಕ್ಷಣಗಳು, ರೋಗ ಹರಡುವಿಕೆ ಮತ್ತು ತಡೆಗಟ್ಟುವ ವಿಧಾನ ಇತ್ಯಾದಿಗಳ ಕುರಿತು ವಿಸ್ತೃತವಾಗಿ ತಿಳಿಸಿದರು.  ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಚನ್ನಬಸವ, ಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿಗಳಾದ ಶರಣಪ್ಪ ಚೌವ್ಹಾಣ ಮತ್ತು ಡಾ. ಜಾಲಿಹಾಳ ಶರಣಪ್ಪ ಉಪಸ್ಥಿತರಿದ್ದರು. ಡಾ. ಪ್ರಶಾಂತ ಕೊಂಕಲ ಅವರು ಸ್ವಾಗತಿಸಿದರೆ, ಬಿ.ಎಸ್ಸಿ 4ನೇ ಸೆಮ್ ವಿದ್ಯಾರ್ಥಿನಿ ಕು. ಸ್ಪಂದನಾ ಪ್ರಾರ್ಥನೆಗೈದರು. ಬಿ.ಎಸ್ಸಿ 6ನೇ ಸೆಮ್ ವಿದ್ಯಾರ್ಥಿನಿ ಕು. ಶಗುಫ್ತ ಕಾರ್ಯಕ್ರಮ ನಿರೂಪಿಸಿದರು.