ಛ.ಶಿವಾಜಿ ಮಹಾರಾಜ ಜಯಂತಿ: ಆರೋಗ್ಯ ತಪಾಸಣೆ ಶಿಬಿರ

Ch.Shivaji Maharaja Jayanti: Health Checkup Camp

ಛ.ಶಿವಾಜಿ ಮಹಾರಾಜ ಜಯಂತಿ: ಆರೋಗ್ಯ ತಪಾಸಣೆ ಶಿಬಿರ  

ಧಾರವಾಡ 19: ಛತ್ರಪತಿ ಶಿವಾಜಿ ಮಹಾರಾಜ 398ನೇ ಜಯಂತಿ ಅಂಗವಾಗಿ ಹರೀಶ ಮೆಡಿ ಲ್ಯಾಬ್ ರಕ್ತ ತಪಾಸಣಾ ಕೇಂದ್ರ, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ  ಸಹಯೋಗದಲ್ಲಿ ನಗರದ ಮರಾಠ ವಿದ್ಯಾಪ್ರಸಾರಕ ಮಂಡಳದಲ್ಲಿ ಆರೋಗ್ಯ ತಪಾಸಣೆ ಶಿಬಿರ ಬುಧವಾರ ಜರುಗಿತು. ಉದ್ಘಾಟಿಸಿದ ವೈದ್ಯೆ ಡಾ.ಭಾರತಿ ಮೋಹಿತೆ ಮಾತನಾಡಿ, ಬಾಯಿ ಆರೋಗ್ಯದ ಕಾಳಜಿ ಅಗತ್ಯ. ಬಾಯಿ ಕ್ಯಾನ್ಸರ್ ಗೆ ತಂಬಾಕು, ಸಿಗರೆಟ್, ಗುಟ್ಕಾ ಕಾರಣ. ತಂಬಾಕು ಮುಕ್ತ ಶಾಲೆ, ಕಾಲೇಜು ಹಾಗೂ ಸಮಾಜ ನಿರ್ಮಾಣದ ಮೂಲಮ ಸ್ವಸ್ಥ್ಯ ಸಮಾಜ ನಿರ್ಮಿಸಬೇಕು ಎಂದು ಕರೆ ನೀಡಿದರು. 10 ಲಕ್ಷದ ಜನರಲ್ಲಿ ಕನಿಷ್ಠ 3 ಲಕ್ಷ ಜನ ದ್ವಿತೀಯ ದರ್ಜೆಯ ಕ್ಯಾನ್ಸರ್ ಕಾಯಿಲೆಗೆ ಒಳಗಾಗುತ್ತಿದ್ದು, ಈ ಕುರಿತು ವಿದ್ಯಾರ್ಥಿಗಳು ಜಾಗೃತಿ ವಹಿಸಬೇಕು. ಮಕ್ಕಳ ಮುಂದೆ ಸಿಗರೆಟ್, ಬಿಡಿ ಮತ್ತು ತಂಬಾಕು ಸೇವನೆಯಿಂದ ದೂರವಿರಬೇಕು ಎಂದರು. ಸದೃಢ, ಉತ್ತಮ ಆರೋಗ್ಯಕ್ಕೆ ಬಾಯಿ ಹಾಗೂ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಬೇಕು. ನಿತ್ಯ ಬೆಳಿಗ್ಗೆ  ರಾತ್ರಿ ಎರಡು ಬಾರಿ ಹಲ್ಲು ಉಜ್ಜಬೇಕು. ಹಲ್ಲು ಅಡ್ಡಾ-ದಿಡ್ಡಿ ಉಜ್ಜಿದರೆ, ವಸಡು ಹಾಳಾಗಲಿದೆ. ಹೀಗಾಗಿ ಮೇಲಿಂದ ಕೆಳಗೆ ಉಜ್ಜಿ ವಸಡು ಕೂಡ ಹಾಳಾಗದಂತೆ ಕಾಪಾಡಿಕೊಳ್ಳಲು ಸಲಹೆ ನೀಡಿದರು.ಡಾ.ಭಾರತಿ ಮೋಹತೆ ಹಾಗೂ ಡಾ.ಸೌರಭ್ ಅವರನ್ನು ಮರಾಠ ಮಂಡಳ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಮರಾಠ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷ ಎಂ.ಎನ್‌. ಮೋರೆ, ಕಾರ್ಯಾಧ್ಯಕ್ಷ ಸುಭಾಷ ಶಿಂಧೆ, ಗೌರವ ಕಾರ್ಯದರ್ಶಿ ರಾಜು ಬಿರಜೆನ್ನವರ, ಸಹ ಕಾರ್ಯದರ್ಶಿ ಮಲ್ಲೇಶಪ್ಪ ಶಿಂಧೆ ನಿರ್ದೇಶಕ ಪುರುಷೋತ್ತಮ ಜಾಧವ, ಸುಭಾಷ ಪವಾರ, ರಾಜು ಕಾಳೆ, ಈಶ್ವರ ಪಾಟೀಲ, ಪ್ರಸಾದ  ಹಂಗಳಕಿ, ಶಿವಾಜಿ ಸೂರ್ಯವಂಶಿ, ದತ್ತಾತ್ರೇಯ ಮೋಟಿ ಅನಿಲಕುಮಾರ ಬೋಸ್ಲೆ ಮಹೇಶ ಶಿಂಧೆ ಸುನಿಲ ಮೋರೆ ಇದ್ದರು. ಇದಕ್ಕೂ ಮೊದಲು ಬೆಳಿಗ್ಗೆ ಮಹಾಲಕ್ಷ್ಮಿ ಹೋಮ, ಬಾಲ ಶಿವಾಜಿ ನಾಮಕರಣ ಹಾಗೂ ತೊಟ್ಟಿಲೋತ್ಸವ ನಂತರ ಕಾಲೇಜು ಆವರಣ ಹಾಗೂ ಛತ್ರಪತಿ ಶಿವಾಜಿ ವೃತ್ತದಲ್ಲಿ ಭಗವಾ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.