ಚಂದನವನದ ನಾಯಕ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

ಬೆಂಗಳೂರು, ಜೂನ್ ೭,  ಉಸಿರಾಟ  ಸಮಸ್ಯೆಯಿಂದ ಬಳಲುತ್ತಿದ್ದ ಚಂದನವನದ  ನಾಯಕ ನಟ ಚಿರಂಜೀವಿ ಸರ್ಜಾ ( ೩೯)  ಭಾನುವಾರ ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಅವರನ್ನು ಬೆಂಗಳೂರಿನ ಸಾಗರ್  ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಚಿರಂಜೀವಿ ಸರ್ಜಾ  ಮೃತಪಟ್ಟಿದ್ದಾರೆ ಎಂದು  ಮೂಲಗಳು ಹೇಳಿವೆ.ವಾಯುಪುತ್ರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಚಿರಂಜೀವಿ ಸರ್ಜಾ  ಕನ್ನಡದ  ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ತೀವ್ರ ಹೃದಯಾಘಾತದಿಂದ ಇಂದು ಅವರು ಕೊನೆಯುಸಿರೆಳೆದಿದ್ದಾರೆ.