ಚಂಡಿಕಾ, ರುದ್ರ ಹೋಮಕ್ಕೆ ಶ್ರೀಶೈಲಶ್ರೀ ಚಾಲನೆ

ಲೋಕದರ್ಶನ ವರದಿ

ಮಾಂಜರಿ 11: ಸಮೀಪದ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಇಂದಿನಿಂದ 9 ದಿನಗಳ ಕಾಲ ಜರುಗಲಿರುವ ಚಂಡಿಕಾ ಮತ್ತು ರುದ್ರ ಹೋಮಕ್ಕೆ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸುವುದರ ಮೂಲಕ ಬುಧವಾರಂದು ಚಾಲನೆ ನೀಡಿದರು.

                ಚಂಡಿಕಾ ಹೋಮ ಇಂದಿನಿಂದ ದಿ. 18ರವರಗೆ ಮುಂ. 7ರಿಂದ 10.30 ಗಂಟೆಯವರಗೆ ಮತ್ತು ರುದ್ರ ಹೋಮ ಸಾಯಂಕಾಲ 6.15 ರಿಂದ 7.20 ರವರಗೆ ಜರುಗಲಿದೆ ಎಂದು ಮಠದ ವ್ಯವಸ್ಥಾಪಕ ಅಡವಯ್ಯಾ ಅರಳಿಕಟ್ಟಿಮಠ ತಿಳಿಸಿದ್ದಾರೆ.

                ಭಧ್ರಕಾಳಿ ಮಾತೆಗೆ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳಕಾಲ ಬಗೆಬಗೆಯ ಅಲಂಕಾರಮಾಡಿ ಶೃಂಗರಿಸುತ್ತೇವೆ. ನಿತ್ಯ ಒಂದೊಂದು ರೀತಿಯ ಅಲಂಕಾರದ ಮೂಲಕ ಒಂಬತ್ತು ದಿನಗಳಕಾಲ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆಮಾತೆಗೆ ಹಣ್ಣಿನ ಅಲಂಕಾರ, ಬೆಣ್ಣೆಯ ಅಲಂಕಾರ, ಆಭರಣದ ಅಲಂಕಾರ, ಕವಡೆಯ ಅಲಂಕಾರ, ಹೂವಿನ ಅಲಂಕಾರ, ಬಟ್ಟೆಯ ಅಲಂಕಾರ, ನವಿಲು ಗರಿಯ ಅಲಂಕಾರ ಮತ್ತು ಅರಿಸಿನ ಕುಂಕುಮ ಅಲಂಕಾರ ಹೀಗೆ ಅಲಂಕಾರ ವಿಶೇಷ ಸೇವೆಗಳು ನಡೆಯುತ್ತವೆ. ನವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯ ಚಂಡಿಕಾ ಹೋಮ ಮತ್ತು ಸಂಜೆ ರುದ್ರಹೋಮಗಳು ನಡೆಯುತ್ತದೆ. ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಏಳು ದಿನಗಳ ಕಾಲ ಮೌನ ವೃತ ಕೈಗೊಳ್ಳುತ್ತಾರೆ ಎಂದು ಹೇಳಿದರು.