ಲೋಕದರ್ಶನ ವರದಿ
ಗಜೇಂದ್ರಗಡ 19: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿ. 15ರಂದು ಮಧ್ಯರಾತ್ರಿ 11-30 ಗಂಟೆಗೆ ಲಕ್ಷ್ಮೀ ಮಂಜುನಾಥ ದಂಡಗಲ್ಲ ವಯಾ 23 ವರ್ಷ ಸಾ. ಧಾರವಾಡ ಇವಳು ಮನೆಯ ಕುಟುಂಬದವರೊಡನೆ ಸಣ್ಣ ಪುಟ್ಟ ಜಗಳ ಕಾಯ್ದು ಸಂಬಂಧಿಕರ ಊರಾದ ಲಿಂಗಸೂಗೂರುಗೆ ಹೋಗುವಾಗ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಗಜೇಂದ್ರಗಡ ಬಸ್ ನಿಲ್ದಾಣದಲ್ಲಿ ಇಳಿದು ವಿಶ್ರಾಂತಿ ಪಡೆಯುತ್ತಿದ್ದಾಗ ಗಜೇಂದ್ರಗಡ ಪೊಲೀಸ್ ಠಾಣೆಯ ಪಿಎ ಆರ್ ವೈ ಜಲಗೇರಿ ಹಾಗೂ ಇಬ್ಬರು"ಚೆನ್ನಮ್ಮ ಮಹಿಳಾ ಪೊಲೀಸ್ ಪಡೆ" ಯವರು ಬಂದು ನನ್ನ ಬಗ್ಗೆ ವಿಚಾರಿಸಿ ಗಜೇಂದ್ರಗಡದ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಆರೋಗ್ಯ ತಪಾಸಣೆ ಮಾಡಿಸಿ ಊಟ ಉಪಚಾರ ಹಾಗೂ ಹಣ್ಣುಗಳನ್ನು ಕೊಟ್ಟು ಬೆಳಗಿನವರೆಗೆ ವಿಶ್ರಾಂತಿ ಪಡೆಯಲು ಬಿಟ್ಟು ಹೋದರು.
ಪುನಃ ದಿ. 16ರಂದು ಆಸ್ಪತ್ರೆಗೆ ಗಜೇಂದ್ರಗಡದ ಠಾಣಾಧಿಕಾರಿಗಳು ಬಂದು ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು ನನ್ನ ಆರೋಗ್ಯದಲ್ಲಿ ಚೇತರಿಕೆ ಆಗಿದ್ದರಿಂದ ನಾನು ಮರಳಿ ನನ್ನ ಊರಾದ ಧಾರವಾಡಕ್ಕೆ ಹೋಗಲು ಅವರೇ ಹಣದ ಸಾಹಯ ಕೂಡಾ ಮಾಡಿದರು.
ಆದ್ದರಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ, ಗಜೇಂದ್ರಗಡ ಪೊಲೀಸ್ ಠಾಣೆಯ ಪಿ ಎಸ್ ಐ ಗೂ ಹಾಗೂ ವಿಶೇಷವಾಗಿ ಚನ್ನಮ್ಮ ಮಹಿಳಾ ಪೊಲೀಸ್ ಪಡೆ ಯವರಿಗೆ ಲಕ್ಷೀ ದಂಡಗಲ್ಲ ಅಭಿನಂದನೆ ಸಲ್ಲಿಸಿದ್ದಾಳೆ. ಈ ರೀತಿ ಮಹಿಳೆಯರಿಗೆ ತೊಂದರೆ ಆದಾಗ ಚೆನ್ನಮ್ಮ ಮಹಿಳಾ ಪೊಲೀಸ್ ಪಡೆಯವರು ಸಾಹಯ ಮಾಡಲು ಸದಾ ಟೊಂಕ ಕಟ್ಟಿ ನಿಂತಿರುತ್ತಾರೆ ಎನ್ನವುದಕ್ಕೆ ಇದು ಜಿವಂತ ಸಾಕ್ಷಿ ಎನಿಸಿದೆ.