ಲೋಕದರ್ಶನವರದಿ
ಧಾರವಾಡ೧೨ : ಎಐಸಿಸಿ ಸದಸ್ಯರಾಗಿರುವ ಧಾರವಾಡ ಜಿಲ್ಲಾ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರು ದಿಯು ದಮನ್ ಕೇಂದ್ರಾಡಳಿತ ಪ್ರದೇಶದ ಕಾಂಗ್ರೆಸ್ ಪಕ್ಷದ ಸ್ಟಾರ್ ಕ್ಯಾಂಪನೇರ್ ಆಗಿ ನೇಮಕಗೊಂಡಿದ್ದಾರೆ.
ದೇಶದ 40 ಹಿರಿಯ ಕಾಂಗ್ರೆಸ್ ನಾಯಕರ ಪಟ್ಟಿಯಲ್ಲಿ ಅವರಿಗೆ ಈ ಸ್ಥಾನ ಸಿಕ್ಕಿದ್ದು ವಿಶೇಷವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಪ್ರಿಯಾಂಕಾ ಗಾಂಧಿ, ರಣದೀಪ್ ಸಿಂಗ್ ಸುಜರ್ೇವಾಲಾ ಸೇರಿದಂತೆ ದೇಶದ ಘಟಾನು ಘಟಿ ನಾಯಕರ ಪೈಕಿ ಇವರು ಒಬ್ಬರಾಗಿದ್ದಾರೆ.
ಈ ಪಟ್ಟಿಯಲ್ಲಿ ರಾಜ್ಯದಿಂದ ಸ್ಥಾನ ಪಡೆದಿರುವ ಏಕೈಕ ಕಾಂಗ್ರೆಸ್ ನಾಯಕ ದೀಪಕ ಚಿಂಚೋರೆ ಅವರು ಆಗಿರುವುದು ಧಾರವಾಡ ಜಿಲ್ಲೆಗೆ ಅದರಲ್ಲೂ ವಿಶೇಷವಾಗಿ ಉತ್ತರ ಕನರ್ಾಟಕ ಭಾಗದ ನಾಯಕರೊಬ್ಬರಿಗೆ ಸ್ಥಾನ ಕಲ್ಪಿಸಿರುವುದು ಎಲ್ಲರಿಗೂ ಕುತೂಹಲ ಕೆರಳಿಸಿದೆ.
ಕಳೆದ ಹಲವು ವರ್ಷಗಳಿಂದ ದಿಯು ದಮನ್ ನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ದೀಪಕ ಚಿಂಚೋರೆ ಅವರು ಕಳೆದ ವಿಧಾನ ಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿನ ಸಮರ್ಥ ನಾಯಕತ್ವ ಗಮನಿಸಿ ಈ ಸ್ಥಾನಮಾನ ನೀಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದಶರ್ಿ ಮೋತಿಲಾಲ್ ಮೋಹ್ರಾ ಅವರು ತಿಳಿಸಿದ್ದಾರೆ.