ಪತ್ರಿಕಾ ಭವನ ಸ್ಥಾಪನೆಗೆ ಬದ್ಧ: ಮಾಮನಿ

29 ಎಂ.ಎನ್.ಎಲ್. 2 ವಿದ್ಯಾಥರ್ಿಗಳ ಸ್ವಾಗತ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಸವದತ್ತಿ ಶಾಸಕ ಆನಂದ ಮಾಮನಿ ಬೈಲಹೊಂ


ಮುನವಳ್ಳಿ 31: ಪತ್ರಿಕಾ ಮಾಧ್ಯಮ ಸಮಾಜದಲ್ಲಿ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಆಗುವ ಅಪರಾಧ ತಪ್ಪು ತಡೆಗಳನ್ನು ಪತ್ರಕರ್ತರು ನಿಭರ್ಿಡೆಯಿಂದ ಪ್ರಕಟಿಸಿ ಸಮಾಜ ಸುಧಾರಣೆಗೆ ಮುಂದಾಗಬೇಕು. ನೈಜ ವರದಿಗಳನ್ನು ಪ್ರಕಟಿಸಿ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಬೇಕು. ಪತ್ರಕರ್ತರ ಆಶಯದಂತೆ ಸವದತ್ತಿಯಲ್ಲಿ ಪತ್ರಿಕಾ ಭವನ ಸ್ಥಾಪನೆಗೆ ಬದ್ಧವಿರುವುದಾಗಿ ಸವದತ್ತಿ ಶಾಸಕ ಆನಂದ ಮಾಮನಿ ಹೇಳಿದರು.


ಪಟ್ಟಣದ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಅನ್ನದಾನೇಶ್ವರ ಪಿ.ಯು.ಕಾಲೇಜ ಹಾಗೂ ಚನ್ನಬಸವ ಮಹಾಸ್ವಾಮೀಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕಾ ಘಟಕ ಸವದತ್ತಿ ಇವರ ಸಂಯಕ್ತಾಶ್ರಯದಲ್ಲಿ ದಿ.30ರಂದು ಜರುಗಿದ ಪ್ರಥಮ ವರ್ಷದ, ಪಿ.ಯು., ಬಿ.ಎ. ಬಿಕಾಂ. ವಿದ್ಯಾಥರ್ಿಗಳ ಸ್ವಾಗತ, ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

   ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ ವಿದ್ಯಾಥರ್ಿಗಳು ಉತ್ತಮವಾಗಿ ವ್ಯಾಸಂಗ ಮಾಡುವ ಮೂಲಕ ತಂದೆ-ತಾಯಿಗಳ ಕನಸನ್ನು ನನಸಾಗಿಸುವಲ್ಲಿ ಪರಿಶ್ರಮ ಪಡೆಬೇಕು ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರು ಹಾಗೂ ಸೋಮಶೇಖರಮಠದ ಮುರುಘೇಂದ್ರ ಮಹಾಸ್ವಾಮಿಗಳು ಬರುವ ದಿನಮಾನಗಳಲ್ಲಿ ಶಾಸಕದ್ವಯರ ಸಹಾಯ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಎಂ.ಕಾಂ. ತರಗತಿ ಪ್ರಾರಂಭಿಸುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಅರುಣಗೌಡ ಪಾಟೀಲ ಮುಖ್ಯಅತಿಥಿಗಳಾಗಿ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಂಡಲೀಕ ಬಾಳೋಜಿ. ಕಾರ್ಯದಶರ್ಿ ಟಿ.ಎನ್. ಮುರಂಕರ, ಮಲ್ಲಿಕಾಜರ್ುನ ಜಮಖಂಡಿ, ಸಂಜು ಕಾಮಣ್ಣವರ, ಶಂಕರ ಗಯ್ಯಾಳಿ, ಸಂಗಪ್ಪ ಶೀಲವಂತ, ಗಂಗಮ್ಮ ಸಂಕನ್ನವರ ಆಗಮಿಸಿದ್ದರು. ಪ್ರಾಸ್ತಾವಿಕವಾಗಿ  ಉಪನ್ಯಾಸಕ ಸುಭಾಸ ಕಾಮನ್ನವರ ಹಾಗೂ ವರದಿಗಾರ ಮಹಾಂತೇಶ ಬಾಳಿಕಾಯಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಇತ್ತೀಚಿಗೆ ಮೃತಪಟ್ಟಿದ ಪತ್ರಿಕಾ ವರದಿಗಾರ ಸುಭಾಶ ನಾಶಿಪುಡಿ ಇವರ ಕುಟುಂಬಕ್ಕೆ ಪತ್ರಕರ್ತರ ಸಂಘದಿಂದ 11 ಸಾವಿರ ರೂ. ಧನಸಹಾಯ ನೀಡಲಾಯಿತು.

ಪತ್ರಿಕಾ ವರದಿಗಾರರಾದ ಬಸವರಾಜ ತುಳಜಣ್ಣವರ, ಪ್ರಶಾಂತ ತುಳಜಣ್ಣವರ, ಮಹಾಂತೇಶ ಗಿಲಾಕಿ, ಮಹಾಂತೇಶ ವಿರಕ್ತಮಠ, ಗಿರೀಶ ರೇವಡಿ, ಪ್ರಕಾಶ ಕಮ್ಮಾರ, ಎಸ್.ಎಸ್. ಸಿದ್ದಗೌಡರ  ಸೇರಿದಂತೆ ಸವದತ್ತಿ ತಾಲೂಕಾ ಕಾರ್ಯನಿರತ ಪತ್ರಕರ್ತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ಪ್ರಾಚಾರ್ಯ ಎಂ.ಎಚ್.ಪಾಟೀಲ. ನಿರೂಪಣೆಯನ್ನು ಆಯ್.ಕೆ.ಮಠಪತಿ ವಂದನಾರ್ಪಣೆಯನ್ನು ಸಿ.ಬಿ.ಕಾರಭಾರಿ ಮಾಡಿದರು.