ಕೊಪ್ಪಳ 25: ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ನೂತನವಾಗಿ ಸ್ಥಾಪಿಸಲಾದ "ಕನರ್ಾಟಕ ಒನ್ ಕೇಂದ್ರದ ಉದ್ಘಾಟನೆಯನ್ನು ಕನರ್ಾಟಕ ಸಕರ್ಾರದ ವೈದ್ಯಕೀಯ ಶಿಕ್ಷಣ ಸಚಿವರಾದ ಈ. ತುಕಾರಾಂ ಅವರು ಸೋಮವಾರದಂದು ಉದ್ಘಾಟಿಸಿದರು.
ಕನರ್ಾಟಕ ಸಕರ್ಾರ ಇಡಿಸಿಎಸ್ ನಿದರ್ೆಶನಾಲಯ, ಇ-ಆಡಳಿತ ಇಲಾಖೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ನಗರಸಭೆಯ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ "ಕನರ್ಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭವು ಸೋಮವಾರದಂದು ಜರುಗಿತು.
ಕನರ್ಾಟಕ ಒನ್ ಕೇಂದ್ರದಿಂದ ಯಾವ-ಯಾವ ಸೌಲಭ್ಯಗಳು ದೊರೆಯಲಿವೆ ಎಂಬುವುದರ ಕುರಿತು ಸಚಿವರು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಸಕರ್ಾರದ ಸಂಸದೀಯ ಕಾರ್ಯದಶರ್ಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಸೇರಿದಂತೆ ಕನರ್ಾಟಕ ಒನ್ ಕೇಂದ್ರದ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.