ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಖಂಡಿಸಿ, ಶೇಡಬಾಳದಲ್ಲಿ ಮೌನಾಚರಣೆ: ಮೃತರಿಗೆ ಶ್ರದ್ಧಾಂಜಲಿ

Condemning the massacre of Hindus in Pahalgam, a moment of silence in Shedbal: Tributes to the decea

ಲೋಕದರ್ಶನ ವರದಿ 

ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಖಂಡಿಸಿ, ಶೇಡಬಾಳದಲ್ಲಿ ಮೌನಾಚರಣೆ: ಮೃತರಿಗೆ ಶ್ರದ್ಧಾಂಜಲಿ 


ಕಾಗವಾಡ 25: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಹಿಂದೂ ಪ್ರವಾಸಿಗರ ಮೇಲಿನ ದಾಳಿ ಖಂಡಿಸಿ, ಭಾರತೀಯ ಜನತಾ ಪಾರ್ಟಿ ಕಾಗವಾಡ ಮಂಡಲ ಹಾಗೂ ಶೇಡಬಾಳ ಪಟ್ಟಣದ ನಾಗರೀಕರಿಂದ ಬುಧವಾರ ದಿ. 24ರಂದು ಕ್ಯಾಂಡಲ್ ಹಚ್ಚಿ ಮೃತಪಟ್ಟವರಿಗೆ ನಮನ ಸಲ್ಲಿಸಲಾಯಿತು. 


ಕಾಶ್ಮಿರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಅಮಾನವೀಯ ಉಗ್ರರ ಹ್ಯೆಯ ಕ್ರತ್ಯವನ್ನು ಖಂಡಿಸಿ, ಉಗ್ರರನ್ನು ಮಟ್ಟ ಹಾಕಬೇಕೆಂದು ಒತ್ತಾಯಿಸಲಾಯಿತು. ನಂತರ ಮೌನಾಚರಣೆ ಮಾಡಿ, ಅಗಲಿದ ಆತ್ಮಗಳಿಗೆ ಶಾಂತಿ ಕೋರಲಾಯಿತು. 


ಪಟ್ಟಣ ಪಂಚಾಯತ್ ಅಧ್ಯಕ್ಷ ಉತ್ಕರ್ಷ ಪಾಟೀಲ, ಚಿಕ್ಕೋಡಿ ಜಿಲ್ಲಾ ಎಸ್‌ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರವೀಣ ಕೆಂಪವಾಡೆ ಸೇರಿದಂತೆ ಪಟ್ಟಣ ಪಂಚಾಯತ್ ಸದಸ್ಯರಾದ ರಾಜು ಚೌಗಲೆ, ಮಹಾಧವಲ ಯಾದವಾಡೆ, ಬಾಬು ಐನಾಪುರೆ, ರಾಮು ನರಸಾಯಿ ಹಾಗೂ ಊರಿನ ಹಿರಿಯ ಮುಖಂಡರಾದ ಕಿರಣ ಯಂದಗೌಡರ, ಪ್ರಕಾಶ ಮಾಳಿ, ಸಚೀನ ಜಗತಾಪ, ಬಾಪು ಜಯಗೌಡರ, ಚಂದು ಜಾಧವ, ಅಶೋಕ ಮಾಕ್ಕನ್ನವರ್, ಶ್ರೀಶೈಲ ಕಟಗೇರಿ, ಬಬನ ಮುಜಾವರ, ಶಿವುಕುಮಾರ ಶಿಂಧೆ, ರಾಮು ಮಾಳಗೆ, ಯುವಕರಾದ ಆಕಾಶ ಸೋಟ್ರಾಯಿ, ಮಾರುತಿ ಕೆಂಪವಾಡೆ, ಸುರೇಶ ಮಾಳಗೆ, ರಾಜು ಖಟಾ0ವೆ, ಕಿರಣ ಗಸ್ತೆ, ಕಾರ್ತಿಕ ನಾಯಿಕ ಸೇರಿದಂತೆ ಇನ್ನೂ ಅನೇಕ ಹಿರಿಯ ನಾಗರಿಕರು ಹಾಜರಿದ್ದರು.