ರಾಣೇಬೆನ್ನೂರು 10 : ನಗರದಲ್ಲಿ ಪಾರ್ಕಗಳು ಹೆಚ್ಚಾಗಿ ಇದ್ದು ಅವುಗಳನ್ನು ಅಭಿವೃದ್ಧಿಪಡಿಸದೆ ಹಾಳಾಗಿ ಹೋಗಿವೆ ಇನ್ನು ಮುಂದೆ ಅವುಗಳನ್ನು ಅಭಿವೃದ್ಧಿಪಡಿಸಿ ಮಹಿಳೆಯರಿಗೆ ಪ್ರತ್ಯೇಕ ಪಾರ್ಕ್ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ತಿಳಿಸಿದರು.
ನಗರದಲ್ಲಿ ಗುರುವಾರ ವಿವಿಧ ಪಾರ್ಕ್ ಗಳಿಗೆ ಶಾಸಕರು ಮತ್ತು ಮಹಿಳಾ ಮುಖಂಡರಾದ ಪೂರ್ಣಿಮಾ ಕೋಳಿವಾಡ್ ಹಾಗೂ ಅಧಿಕಾರಿ ಸಿಬ್ಬಂದಿಗಳ ಜೊತೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.ನಗರದ ಸೌಂದರ್ಯರಿಕರಣಕ್ಕೆ ಮಹಿಳೆಯರಿಗಾಗಿಯೇ ಪ್ರತ್ಯೇಕ "ಪಿಂಕ್ ಪಾರ್ಕ’ ನಿರ್ಮಾಣದ ಕುರಿತು ಅಗತ್ಯ ಸಲಹೆಗಳನ್ನು ಪಡೆದರು. ಸಾರ್ವಜನಿಕರು ಈ ಯೋಜನೆಯ ಕುರಿತು ಸಂತಸ ವ್ಯಕ್ತಪಡಿಸಿದರು. ಆದಷ್ಟು ಬೇಗ ಈ ಮಹತ್ವಪೂರ್ಣ ಕಾರ್ಯವು ಆರಂಭವಾಗಲಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಅವರು ಹೇಳಿದರು.