ಗ್ರಾಹಕರ ಕುಂದು ಕೊರತೆ ನಿವಾರಣಾ ಸಭೆ

ಲೋಕದರ್ಶನ ವರದಿ

ಬೆಳಗಾವಿ, 19: ದಿ. 18.ರಂದು ಬೆಳಿಗ್ಗೆ 11.00 ಘಂಟೆಗೆ ಬೆಳಗಾವಿ ವಲಯ ಕಚೇರಿ ಸಭಾಂಗಣದಲ್ಲಿ ಅಧೀಕ್ಷಕ ಅಭಿಯಂತರರು(ವಿ), ಕಾ ಮತ್ತು ಪಾ ವೃತ್ತ, ಹೆಸ್ಕಾಂ., ನೆಹರು ನಗರ, ಬೆಳಗಾವಿರವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಹಕರ ಕುಂದು ಕೊರತೆ ನಿವಾರಣಾ ಸಭೆಯನ್ನು ಆಯೋಜಿಸಲಾಯಿತು.

ಈ ಕಛೇರಿಯ ಆಹ್ವಾನದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಬೆಳಗಾವಿ ವೃತ್ತ ವ್ಯಾಪ್ತಿಯ ವಿದ್ಯುತ್ ಗ್ರಾಹಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಪ್ರತಿನಿಧಿಗಳು ಮತ್ತು ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ವಿದ್ಯುತ್ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಿ ಪರಾಮಶರ್ಿಸಲಾಯಿತು.