ಜುಗೂಳ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ

ಲೋಕದರ್ಶನ ವರದಿ

ಕಾಗವಾಡ  ಜುಲೈ 12:  ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ. ಕೊರೊನಾ ಸೋಂಕಿತರು ಹಿರೆಬಾಗೆವಾಡಿ ಗ್ರಾಮದಿಂದ ಜುಗೂಳ ಗ್ರಾಮದ ಆಪ್ತರ ಮನೆಗೆ ಆಗಮಿಸಿದ ಪತಿ-ಪತ್ನಿಗೆ ಕೊರೊನಾ ಸೋಂಕು ದೃಡಪಟ್ಟಿದೆ.

ಜುಲೈ 9 ರಂದು ಹೀರೆಬಾಗೆವಾಡಿಯಿಂದ ಜುಗೂಳ ಗ್ರಾಮಕ್ಕೆ ಆಗಮಿಸಿದ್ದರು. ಹೀರೆಬಾಗೆವಾಡಿಯಲ್ಲಿ ಇವರನ್ನು ಕ್ವಾರಂಟೈನ್ ಮಾಡಿದ್ದರು. ಆದರೂ ಜುಗೂಳ ಗ್ರಾಮದಲ್ಲಿಯೂಅವರನ್ನು ಜುಲೈ 9 ರಂದು ಕ್ವಾರಂಟೈನ್ ಮಾಡಿ, ಸ್ಲ್ಯಾಬ ತಪಾಸಣೆಗೆ ಕಳುಹಿಸಿದ್ದರು. ಅದು ಈಗ ಪಾಸಿಟಿವ್ ಬಂದಿದೆ.ಇದ್ದರಿಂದ ರವಿವಾರ ರಂದು ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಇವರ ಆದೇಶ ಮೇರಿಗೆಉಪತಹಸೀಲ್ದಾರ ವಿಜಯ ಚೌಗುಲೆ, ಶಿರಗುಪ್ಪಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೌಮ್ಯಾ ಚೌಗುಲೆ, ಜುಗೂಳ ಗ್ರಾಪಂ ಅಧ್ಯಕ್ಷ ಸಂಜಯ ಮಿಣಚೆ, ಪಿಎಸ್ಐ ಹನುಮಂತ ಧರ್ಮಟ್ಟಿ, ಪಿಡಿಓ ಅನೀಲ ಸುಂಕೆ, ಗ್ರಾಮಲೇಕ್ಕಾಧಿಕಾರಿ ಎಂ.ಎಸ್.ಜೋರೆ ಇವರು ಸೋಂಕಿತರನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ಉಪಚಾರಕ್ಕಾಗಿ ರವಾನಿಸಿದ್ದಾರೆ.

12 ಜನರನ್ನು ಕ್ವಾರಂಟೈನ್:

ಜುಗೂಳ ಗ್ರಾಮದ 12 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.ಇವರ ಮನೆಗೆ ಇಬ್ಬರು ಕೊರೋನಾ ಸೋಂಕಿತರು ಬಂದಿದ್ದರಿಂದ 75-70 ವಯಸ್ಸಿನ ವೃದ್ಧರು ಸೇರಿ 12 ಜನರನ್ನು ಸ್ಥಳೀಯ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.