ಕೊರೋನ ವೈರಸ್ ಹಾವಳಿ: ಚೀನಾದಲ್ಲಿ ಮುಂದುವರಿದ ಮರಣ ಮೃದಂಗ.!!

ಬೀಜಿಂಗ್, ಫೆ 5,  ಕೊರೋನ ವೈರಸ್ ಹಾವಳಿಯಿಂದ  ತತ್ತರಿಸಿರುವ ಚೀನಾದಲ್ಲಿ  ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 500 ಗಡಿ ಸಮೀಪಿಸಿದ್ದು, ಮರಣ ಮೃದಂಗ ಮುಂದುವರೆದಿದೆ. ಈವರೆಗೆ 490 ಮಂದಿ ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ ಒಟ್ಟು 24,300 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ  ಎಂದೂ  ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಫಿಲಿಪೀನ್ಸ್ ಮತ್ತು ಹಾಂಕಾಂಗ್ನಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ. 

ಚೀನಾದಲ್ಲಿ ಮಾರಕ ವೈರಸ್ ತೀವ್ರಗೊಂಡ  ಬೆನ್ನಲ್ಲೇ ಚೀನಾದಿಂದ ಬರುವ ಪ್ರವಾಸಿಗಳಿಗೆ ಹಲವು ದೇಶಗಳು ನಿರ್ಬಂಧ ಹಾಕಿವೆ.  ಹ್ಯುಬೀ ಪ್ರಾಂತ್ಯದ ಜನ ತಮ್ಮ ದೇಶದ ಗಡಿಯೊಳಕ್ಕೆ ಪ್ರಯಾಣಿಸದಂತೆ ಬಹುತೇಕ ದೇಶಗಳು ನಿಷೇಧ ಹಾಕಿದ್ದು,  ಚೀನಾದಿಂದ ವಿಮಾನಯಾನ ಸೇವೆ  ಸ್ಥಗಿತಗೊಳಿಸಲಾಗಿದೆ. ಹ್ಯುಬೀ ಪ್ರಾಂತ್ಯದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿಬ್ಬಂದಿ ಹೆಣಗಾಡುತ್ತಿದ್ದಾರೆ.  ತೀವ್ರ ನಿಗಾ ತಜ್ಞರ ಕೊರತೆ ಹಾಗೂ ಆಸ್ಪತ್ರೆಗಳಲ್ಲಿ ಬೆಡ್ ಅಭಾವ, ಮೇಲಾಗಿ ಆಸ್ಪತ್ರೆ ಗಳ ಅಭಾವ  ವೈದ್ಯರಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ.