ಮಾಸ್ಕೋ, ಫೆ 6,ಚೀನಾದಲ್ಲಿ ಮಾರಣಾಂತಿಕ ನೋವೆಲ್ ಕೊರೋನಾ ವೈರಾಣು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 563ಕ್ಕೇರಿದ್ದು, 28,018 ಜನರಿಗೆ ಸೋಂಕು ತಗುಲಿದೆ ಎಂದು ಚೀನಾದ ರಾಜ್ಯ ಆರೋಗ್ಯ ಸಮಿತಿ ಗುರುವಾರ ವರದಿ ಮಾಡಿದೆ. ಇಲ್ಲಿಯವರೆಗೆ 1153 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಫೆ. 5ರ ಮಧ್ಯರಾತ್ರಿಯವರೆಗೆ ದೇಶದ 31 ಪ್ರಾಂತ್ಯಗಳಲ್ಲಿ ಸುಮಾರು 28018 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 3859 ಜನರ ಸ್ಥಿತಿ ಗಂಭೀರವಾಗಿದೆ ಎಂದು ಸಮಿತಿ ತಿಳಿಸಿದೆ. ಕೊರೋನಾ ವೈರಾಣು ಸೋಂಕಿನ ಪರಿಣಾಮವಾಗಿ ಚೀನಾದಲ್ಲಿ 24324 ಜನರು ನ್ಯೂಮೋನಿಯಾ ಕಾಯಿಲೆಗೆ ತುತ್ತಾಗಿದ್ದು, 490 ಜನರು ಸಾವನ್ನಪ್ಪಿದ್ದಾರೆ.