ಸಂಬರಗಿ 26: ಜಂಬಗಿ ಗ್ರಾಮದ ಹೊರ ವಲಯದ ತೋಟದ ವಸತಿಯಲ್ಲಿರುವ ಶಿವಾಜಿ ರಾಮು ಗೂಡೋಡಗಿ ಇವರು ಸಾಲ ಮಾಡಿ ತೆಗೆದುಕೊಂಡ ಹಸು ಆಕಸ್ಮಿಕವಾಗಿ ಸತ್ತು ಹೋದ ಪರಿಣಾಮ ಸುಮಾರು 1 ಲಕ್ಷ ರೂ. ಹಾನಿಯಾಗಿದೆ. ಆದ್ದರಿಂದ ಸರ್ಕಾರ ಸಹಾಯಧನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಶಿವಾಜಿ ರಾಮು ಗುಡೋಡಗಿ ಇವರು ತಮ್ಮ ಪತ್ನಿಯಾದ ಮೀನಾಕ್ಷಿ ಗುಡೋಡಗಿ ಇವರ ಹೆಸರಿನಿಂದ ಸಂಘದಿಂದ ಸಾಲಪಡೆದು ಹಸು ಖರೀದಿ ಮಾಡಿ ತಮ್ಮ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಆಕಸ್ಮಿಕವಾಗಿ ಹಸು ದವನಯಲ್ಲಿ ಬಿದ್ದು ಮೃತಪಟ್ಟಿದೆ. ಈ ಕುರಿತು ಸರ್ಕಾರಿ ಪಶು ಚಿಕಿತ್ಸಾಲಯ ಜಂಬಗಿಯಲ್ಲಿ ಹಸು ಮರಣೋತ್ತರ ಪರೀಕ್ಷೆ ಮಾಡಲಾಯಿತು.
ಶಿವಾಜಿ ರಾಮು ಗುಡೋಡಗಿ ಇವರು ಪಡೆದಿರುವ ಸಾಲವನ್ನು ಮರು ಪಾವತಿ ಮಾಡುವ ಚಿಂತೆಯಲ್ಲಿದ್ದಾರೆ. ಇವರ ಸಾಲವನ್ನು ಮನ್ನಾ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.