ರಸ್ತೆ ಅಪಘಾತದಲ್ಲಿ ಗಾಯಾಳುಗಳಿಗೆ ಆರ್ಥಿಕ ಸಹಾಯ ಮಾಡಿದ ಡಿ.ಟಿ.ಶ್ರೀನಿವಾಸ ದಂಪತಿಗಳು

D.T. Srinivasa couple provided financial assistance to those injured in a road accident

ರಸ್ತೆ ಅಪಘಾತದಲ್ಲಿ ಗಾಯಾಳುಗಳಿಗೆ ಆರ್ಥಿಕ ಸಹಾಯ ಮಾಡಿದ ಡಿ.ಟಿ.ಶ್ರೀನಿವಾಸ ದಂಪತಿಗಳು 

ಚಿಕ್ಕೋಡಿ, 24 : ಇತ್ತಿಚ್ಚೆಗೆ ನಡೆದ  ಗೊಲ್ಲ, ಯಾದವ, ಹಣಬರ ಸಮಾವೇಶಕ್ಕೆ ಆಗಮೀಸುವ ವೇಳೆಯಲ್ಲಿ ಹುಕ್ಕೇರಿ ತಾಲೂಕಿನ ಬೋರಗಲ್ಲ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಣಬರ ಸಮಾಜದ ಸರಜೆರಾವ ಜರಳೆ ಮತ್ತು ಇನ್ನು ಮೂರು ಜನರಿಗೆ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ. ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಆರ್ಥಿಕ ಸಹಾಯ ಮಾಡಿ ಮಾನವೀಯತೆ ತೋರಿದ್ದಾರೆ. ಕೆ. ಪೂರ್ಣಿಮಾ ಹಾಗೂ ಡಿಟಿ ಶ್ರೀನಿವಾಸ ದಂಪತಿಗಳು ಜಿಲ್ಲಾಧ್ಯಕ್ಷರಿಂದ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿ ಕೂಡಲೆ  50,000 ರೂಪಾಯಿಗಳನ್ನು ಅಪಘಾತದ ಕುಟುಂಬದವರಿಗೆ ಸಹಾಯಾರ್ಥವಾಗಿ ನೀಡುವುದಾಗಿ ತಿಳಿಸಿದರು. 

 ಶ್ರೀ ಗುರುದತ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕುಗನೊಳಿಯ ಸಂಸ್ಥಾಪಕ ಅಧ್ಯಕ್ಷರಾದ ಸಚೀನ ಖೋತ್ ಅವರು ಕೂಡ 25000 ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು. 

 ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಕೋಲಾಪುರಕ್ಕೆ ತೆರಳಿ ಗಾಯಾಳು ಕುಟುಂಬಕ್ಕೆ ಸಾಂತ್ವನ ಹೇಳಿ ಅವರಿಗೆ ಡಿ.ಟಿ. ಶ್ರೀನಿವಾಸ ದಂಪತಿಗಳ ಪರವಾಗಿ ಸಹಾಯ ಧನ ನೀಡಿದರು.ಈ ಸಂದರ್ಭದಲ್ಲಿ ವಸಂತ ಕರಕಳಿ, ಸಚಿನ್ ಖೋತ, ಜಿಲ್ಲಾಧ್ಯಕ್ಷರಾದ .ಶೀತಲ್ ಮುಂಡೆ, ಮಡಿವಾಳಪ್ಪ ಬಸರಿಗೆ ಜಗನ್ನಾಥ್ ಖೊತ ಪ್ರದೀಫ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.