ಜೀವ ಕೊಟ್ಟು ಜೀವನ ರೂಪಿಸಿದವನು ಅಪ್ಪ

ಲೋಕದರ್ಶನ ವರದಿ

ಅಥಣಿ  05: ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ವ್ಯಾತ್ಸಲ್ಯ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಕ್ಕೆ ಮಾತ್ರ ನಿಲುಕುವಂತದ್ದು ಎಂದು  ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅದ್ಯಕ್ಷ, ಶಾಸಕರು ಆದ ಪಿ ರಾಜೀವ  ಅವರು ಹೇಳಿದರು.  

ಚಮಕೇರಿಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಟ್ರಸ್ಟ, ಜನವರಿ 03 ರಂದು ಹಮ್ಮಿಕೊಂಡಿರುವ ಅಪ್ಪನ ಜಾತ್ರೆಯ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡುತಿದ್ದರು. 

ಅಮ್ಮ ಎನ್ನುವ ದೇವತೆ ಹೊತ್ತು, ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ. ರಕ್ಷಣೆ ಒದಗಿಸುತ್ತದೆ. ಮೌನವಾಗಿಯೇ ನಮ್ಮೆಲ್ಲ ಜವಾಬ್ದಾರಿಯನ್ನು ಹೊರುವ ಅಪ್ಪ ಮಳೆ, ಚಳಿ, ಗಾಳಿ ಎನ್ನದೇ ನಮಗಾಗಿ ಬೆವರು ಸುರಿಸುತ್ತಾನೆ. ನಿದ್ದೆಗೆಡುತ್ತಾನೆ. ನಿಮಗಾಗಿ ಬದುಕು ತೆತ್ತೆ ಎನ್ನದೆ ಅಪ್ಪ ಸದಾ ನಮಗಾಗಿಯೇ ಹೆಣಗಾಡುತ್ತಾನೆ. ಆ ನಿಟ್ಟಿನಲ್ಲಿ ಟ್ರಸ್ಟ ಹಮ್ಮಿಕೊಂಡಿರುವ ಅಪ್ಪನ ಜಾತ್ರೆಗೆ ಆಗಮಿಸುವುದಾಗಿ ತಿಳಿಸಿದರು. 

ಸಾನಿದ್ಯವಹಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಅಪ್ಪ ಅಂದ್ರೆ ಹಾಗೇ, ಆಕಾಶಕ್ಕೂ ಮಿಗಿಲಾದವನು. ಅನುಭವದ ಖನಿ, ಸಾಂತ್ವನದ ಗಣಿ. ಬಡತನ, ಬೇಸರ, ಕೊರಗು, ಅವಮಾನ ಎಲ್ಲವನ್ನೂ ತನ್ನ ಜೋಳಿಗೆಯೊಳಗೆ ಬಚ್ಚಿಟ್ಟು ಮಕ್ಕಳ ಮುಂದೆ ಮನಸಾರೆ ನಕ್ಕವನು. ಅಪ್ಪನ ವಿರೋಧದ ನಡುವೆಯೂ ತಮ್ಮಿಷ್ಟದ ಬದುಕನ್ನೇ ಆಯ್ಕೆ ಮಾಡಿಕೊಂಡ ಮಕ್ಕಳನ್ನು ಎಂದಿಗೂ ದ್ವೇಷದಿಂದ ನೋಡದವನು ಅಪ್ಪ. ಜೀವನ ಹಿಮ್ಮುಖವಾಗಿ ನಡೆಯುವುದಿಲ್ಲವಲ್ಲ ಎಂದು ತನಗೆ ತಾನೇ ಸಾಂತ್ವನ ಹೇಳಿಕೊಂಡವನು. ತನ್ನಿಷ್ಟ ಮೀರಿ ಬದುಕು ಕಟ್ಟಿಕೊಂಡ ಮಕ್ಕಳು, ತನ್ನನ್ನು ಒಂಟಿಯಾಗಿ ತೊರೆದು ಹೋದಾಗಲೂ ಅದೇ ನಿಲರ್ಿಪ್ತ ಮುಖಭಾವದಲ್ಲೇ ಉಳಿದವನು ಅಪ್ಪ. ಅದೇ ಮಕ್ಕಳು ಕಷ್ಟದಲ್ಲಿದ್ದಾರೆ ಎಂದಾಗ ಸವೆದ ಚಪ್ಪಲಿಯಲ್ಲೇ ಒಡೋಡಿ ಬರುವ ಹುಚ್ಚು ಆಸಾಮಿ ಈ ಅಪ್ಪ. ಬಾಲ್ಯದಿಂದಲೂ ಮಹಾದೇವ ಬಿರಾದಾರ ಅಪ್ಪನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡವನು. ಆ ನಿಟ್ಟಿನಲ್ಲಿ ಜನವರಿ 3 ರಂದು ವಿಶಿಷ್ಟ ರೀತಿಯಲ್ಲಿ ಮಹಾದೇವ ಬಿರಾದಾರ "ಅಪ್ಪನ ಜಾತ್ರೆಯನ್ನು ಮಾಡುವುದರ ಮೂಲಕ "ಅಪ್ಪ ಪ್ರಶಸ್ತಿ" ಪ್ರದಾನ ಮಾಡುತ್ತ,  ಬರುತ್ತಿದ್ದಾನೆ ಎಂದರು. 

ಸ್ಮಾರ್ಟಸಿಟಿ ನಿರ್ದೇಶಕ ಶಸಿದರ ಕುರೇರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಗಂಗಾಧರ ಬೆವಿನಕೊಪ್ಪ, ಟ್ರಸ್ಟ ಅಧ್ಯಕ್ಷ ಮಹಾದೇವ ಬಿರಾದಾರ  ಸೇರಿದಂತೆ ಇತರರು ಇದ್ದರು