ದಲಿತರ ಕುಂದು ಕೊರತೆ ಸಭೆ

Dalit grievance meeting

ಸಂಬರಗಿ 15: ರಾಜ್ಯ ಸರ್ಕಾರದ ಆದೇಶದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ದಲಿತರ ಕುಂದು ಕೊರತೆ ಸಭೆ ನಡೆಸಿ ಹಲವಾರು ಸಮಸ್ಯೆಗಳು ಅಥಣಿ ಉಪವಿಭಾಗದ ಡಿ.ವಾಯ್‌.ಎಸ್‌.ಪಿ ಪ್ರಶಾಂತ ಮುನ್ನೋಳಿ ಪರ್ಯಾಯಗೊಳಿಸಿದ್ದಾರೆ. ದಲಿತರ ಕುಂದು ಕೊರತೆ ಸಭೆಯಲ್ಲಿ ಹಲವಾರು ದಲಿತರು ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಮುಂದೆ ಬಿಚ್ಚಿಟ್ಟರು. ಅಧಿಕಾರಿಯಿಂದ ಅವರಿಗೆ ಸಮಸ್ಯೆಗೆ ನ್ಯಾಯ ಒದಗಿದೆ.  

ಅನಂತಪೂರ ಗ್ರಾಮದ ಸಿದ್ದಾರ್ಥ ನಗರದ ಸಮುದಾಯ ಭವನದಲ್ಲಿ ಪಿ.ಎಸ್‌.ಐ ಮಲ್ಲಿಕಾರ್ಜುನ ಉಪ್ಪಾರ, ಸಿ.ಪಿ.ಐ ಸಂತೋಷ ಹಳ್ಳೂರ, ಡಿ.ವಾಯ್‌.ಎಸ್‌.ಪಿ ಪ್ರಾಶಾಂತ ಮುನ್ನೊಳ್ಳಿ ಇವರ ಉಪಸ್ಥಿತಿಯಲ್ಲಿ ದಲಿತರು ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಮುಂದೆ ತೋಡಿಕೊಂಡವರು, ಆ ಸಮಸ್ಯೆಗಳಿಗೆ ಕ್ರಮ ಕೈಗೊಂಡು ಪರಿಹಾರ ಒದಗಿಸಿದ್ದಾರೆ. ಅನಂತಪೂರ ಗ್ರಾಮದಲ್ಲಿ ಸಮುದಾಯ ಭವನದ ಮುಂದೆ ಸಿ.ಸಿ ಕ್ಯಾಮರಾ ಅಳವಡಿಸಬೇಕೆಂದು ಸಭೆಯಲ್ಲಿ ಅಧಿಕಾರಿಗಳ ಮುಂದೆ ದಲಿತ ಮುಖಂಡರು ಹೇಳಿದ ನಂತರ ಕ್ರಮ ಕೈಗೊಂಡು ಸಿ.ಸಿ ಕ್ಯಾಮರಾ ಅಳವಡಿಸಿದ್ದಾರೆ. ಅದೇ ಪ್ರಕಾರ ಮಹಿಳೆಯರಿಗೆ ಶೌಚಾಲಯ ಕೊರತೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದ ನಂತರ ಶಿರ್ಘದಲ್ಲಿ ಕ್ರಮ ಕೈಗೊಂಡಿದ್ದಾರೆ. ಎರಡು ಕೆಲಸ ಮುಖ್ಯ ಎಂದು ಸಭೆ ಮುಗಿನ ಕೆಲವೇ ದಿನಗಳಲ್ಲಿ ಕಾರ್ಯ ರೂಪಕ್ಕೆ ತಂದಿದ್ದಾರೆ. 

ದಲಿರತ ಕುಂದು ಕೊರತೆಯ ಸಭೆ ತಾಲೂಕಾ ಮಟ್ಟದಲ್ಲಿ ನಡೆಯುತ್ತಿದ್ದು, ಈಗ ಗ್ರಾಮ ಮಟ್ಟದಲ್ಲಿ ಪೋಲೀಸ್ ಅಧಿಕಾರಿಗಳು ಸಭೆ ನಡೆಸಿ ಜನರ ಸಮಸ್ಯೆಯನ್ನು ಕೆಳಿಕೊಂಡು ಕ್ರಮ ಕೈಗೊಂಡಿದ್ದಾರೆ. ಸಾಮಾನ್ಯ ವ್ಯಕ್ತಿಗೆ ತಮ್ಮ ಸಮಸ್ಯೆ ಹೇಳಲು ತಾಲೂಕಾ ಪೋಲಿಸ್ ಠಾಣೆಗೆ ಹೋಗಲು ಅಸಾಧ್ಯವಾಗುತ್ತಿದೆ. ಆ ಕಾರಣ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಸಭೆ ನಡೆಸಿ ಜನರ ಸಮಸ್ಯೆ ಪರ್ಯಾಯಗೊಳಿಸಿದ್ದಾರೆ. ಆ ಕಾರಣ ಪೋಲೀಸ್ ಇಲಾಖೆಗೆ ಗ್ರಾಮೀಣ ಪ್ರದೇಶದ ಜನರು ಅಭಿನಂಧಿಸಿದ್ದಾರೆ. 

ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಗ್ರಾಮದಲ್ಲಿ ಪ್ರತಿ ತಿಂಗಳ ಜನರ ಸಮಸ್ಯೆ, ಕುಂದು ಕೊರತೆಗಳ ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರ ಇದ್ದರೆ, ಯಾವುದೇ ಸಮಸ್ಯೆ ಪರ್ಯಾಗೊಳಿಸಲು ವಿಳಂಬವಾಗುವುದಿಲ್ಲ. ಪ್ರತಿ ತಿಂಗಳ ಸಭೆಯಲ್ಲಿ ಅಧಿಕಾರಿಗಳು ಉಪಸ್ಥಿತ ಇರಬೇಕೆಂದು ಜನರು ವಿನಂತಿ ಮೂಲಕ ಆಗ್ರಹಿಸಿದ್ದಾರೆ.