ಶಕ್ತಿಯ ಸ್ವರೂಪರಾಗುವ ಹಬ್ಬವೇ ದಸರಾ ಹಬ್ಬ

ಲೋಕದರ್ಶನ ವರದಿ

ಗದಗ: ದಸರಾ ಉತ್ಸವವನ್ನು ಆಚರಿಸುತ್ತಿದ್ದೇವೆ ಆದರೆ ಅಸುರಿ ಗುಣಗಳ ಕಾರಣ  ಉತ್ಸಾಹವೇ ಇಲ್ಲದ ಹಬ್ಬವಾಗಿದೆ. ಮನುಷ್ಯರ ಒಳಗಡೆಯೇ ದಯೆ, ಶಾಂತಿ, ಶಕ್ತಿ ಮುಂತಾದ ದೈವಿ ಗುಣಗಳು ಇವೆ. ಆದರೆ ಇಂದಿನ ಮನುಷ್ಯ ಅವುಗಳನ್ನು ಮರೆತು ರಾಕ್ಷಸೀಯ ಗುಣಗಳಾದ ಕ್ರೋಧ, ಲೋಬ, ಮಧ, ಅಹಂಕಾರ ಇತ್ಯಾದಿ ಗುಣಗಳಿಗೆ ವಶವಾಗಿ ಜೀವಿಸುತ್ತಿದ್ದಾನೆ. ಆದ್ದರಿಂದ ನೆಮ್ಮದಿಯ ಜೀವನ ವಿಲ್ಲ. ಈಶ್ವರೀಯ ವಿಶ್ವವಿದ್ಯಾಲಯವು ಚೈತನ್ಯ ದೇವಿಯರನ್ನು ಕೂಡ್ರಿಸಿ ಅವರಿಂದ ಮನುಕುಲಕ್ಕೆ ದೈವಿ ಗುಣಗಳನ್ನು ಧಾರಣೆ ಮಾಡಿಕೊಳ್ಳುವ ಸಂದೇಶವನ್ನು ಕೊಡಿಸುತ್ತಿದ್ದಾರೆ. ಶಿವನನ್ನು ನೆನೆದಾಗ ನಾವು ಶಕ್ತಿಸ್ವರೂಪ ದೇವತೆಗಳಾಗುತ್ತೇವೆ ಎಂದು ಇವತ್ತಿನ ದಸರಾ ಮಹೋತ್ಸವದ ಆಚರಣೆಯ ಉದ್ದೇಶವಾಗಿದೆ  ಎಂದು ಗದಗ-ಧಾರವಾಡ ಪ್ರಧಾನ ಸಂಚಾಲಕೀಯರಾದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬಿ.ಕೆ. ಜಯಂತಿ ಅಕ್ಕನವರು ದಸರಾ ಸಂದೇಶ ನೀಡಿದರು. 

ಜ್ಯೋತಿ ಬೆಳಗಿಸಿದ ಧಮರ್ೇಶ ಪುಣೇಕರ ಅಣ್ಣನವರು ಇಂದು ನಾವು ದೈವಿ ಗುಣಗಳ ಕೊರತೆಯಿಂದ ದುಃಖವನ್ನು ಅನುಭವಿಸುತ್ತಿದ್ದೇವೆ ಆದ್ದರಿಂದ ನಾವು ದೈವಿ ಗುಣಗಳನ್ನು ದಸರಾ ಮಹೋತ್ಸವದಲ್ಲಿ ಧಾರಣೆ ಮಾಡಿಕೊಂಡು ಶ್ರೇಷ್ಠರಾಗಲು ಪರಿಶ್ರಮಿಸಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರವೀಣ ವಾರಕರ, ಮಹೇಶ ಕೋರಿ, ಮುರಿಗೆಪ್ಪನವರು, ಸಂತೋಷ ಕಬಾಡಿ, ದೀಪು ಸಾಹುಕಾರ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮ ಮೂರು ದಿನಗಳ ವರೆಗೆ ನಡೆದು ಸಾವಿರಾರು ಭಕ್ತರು ಚೈತನ್ಯ ದೇವಿಯರ ದರ್ಶನ ಪಡೆದರು. ಮತ್ತು ಈ ಮಹೋತ್ಸವದ ಅಂಗವಾಗಿ ನಡೆಯುವ ಶಿಬಿರಕ್ಕೆ ಎಲ್ಲರನ್ನು ಸ್ವಾಗತಿಸಿದರು.