ಸಮಾಲೋಚನಾ ಸ್ಪರ್ಧೆ: ಆರ್. ಎಲ್ ಲಾ. ಕಾಲೇಜು ವಿದ್ಯಾರ್ಥಿಗಳ ಸಾಧನೆ
ಬೆಳಗಾವಿ 09: ಕೆ.ಎಲ್.ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಉಜ್ವಾಲಾ ಹವಾಲ್ಡಾರ್ ಮತ್ತು ಸಮಿಕ್ಷಾ ಮಹಾದಿಕ್ ವಿದ್ಯಾರ್ಥಿಗಳು ಹುಬ್ಬಳ್ಳಿಲಿಯ ಕೆ.ಲ್.ಇ.ಜಿ ಕೆ ಜಿ.ಕೆ. ಕಾನೂನು ಕಾಲೇಜು ಸ್ಪರ್ಧೆಯನ್ನು ಆಯೋಜಿಸಿತ್ತು. ಭಾರತದ ವಿವಿಧ ಭಾಗಗಳಿಂದ ಸುಮಾರು 40 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಉಜ್ವಾಲಾ ಹವಾಲ್ಡಾರ್ ಅತ್ಯುತ್ತಮ ಸಮಾಲೋಚಕ ಪ್ರಶಸ್ತಿ ಮತ್ತು ತಂಡದ ನಗದು ಬಹುಮಾನ 10,000 ಮತ್ತು ಟ್ರೋಫಿಯನ್ನು ಗೆದ್ದರು. ಕಾಲೇಜಿನ, ಆಡಳಿತ ಮಂಡಳಿ, ಅಧ್ಯಕ್ಷ ಎಂ. ಆರ್ ಕುಲಕರ್ಣಿ, ಕರ್ನಾಟಕ ಲಾಸ್ ಸೊಸೈಟಿ ಸದಸ್ಯರು, ಪ್ರಾಂಶುಪಾಲ ಡಾ. ಎ.ಎಚ್. ಹವಾಲ್ದಾರ್, ತಂಡದ ತರಬೇತುದಾರ ಡಾ. ಸಮೀನಾ ನಾಹಿದ್ ಬೇಗ್ ಮತ್ತು ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ವಿಜೇತರನ್ನು ಅಭಿನಂದಿಸಿದರು.