ಲೋಕದರ್ಶನ
ವರದಿ
ಶೇಡಬಾಳ
30: ಕಳೆದ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣ ನೀಡುವಂತೆ
ಹಾಗೂ ಪ್ರಸಕ್ತ ಸಾಲಿನಲ್ಲಿ ಕಬ್ಬಿನ ದರ ಘೋಷಿಸಿದ ನಂತರ
ಕಾಖರ್ಾನೆಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರು ಸ್ವಯಂ ಪ್ರೇರಿತವಾಗಿ ಕಬ್ಬು ಕಟಾವು ಮಾಡುವುದನ್ನು ನಿಲ್ಲಿಸಿದ್ದರೂ
ಕೂಡ ಕೆಲವೊಂದು ಸಕ್ಕರೆ ಕಾಖರ್ಾನೆಯವರು ತಮ್ಮ ಸಮರ್ಥಕರಿಂದ ಕಬ್ಬು
ಕಟಾವು ಮಾಡಿಸಿ ಕಳ್ಳ ಮಾರ್ಗದಿಂದ ಕಬ್ಬು
ಸಾಗಾಟ ಮಾಡುತ್ತಿರುವುದು ರೈತರ ಕೆಂಗೆಣ್ಣಿಗೆ ಕಾಖರ್ಾನೆಗಳು
ಗುರಿಯಾಗಿವೆ.
ಉಗಾರ
ಬಿ.ಕೆ ಗ್ರಾಮದ ರೈತರು
ಸೋಮವಾರ ದಿ. 29 ರಂದು ರಾತ್ರಿ ಟ್ರ್ಯಾಕ್ಟರ್
ಮೂಲಕ ಕಾಖರ್ಾನೆಗಳಿಗೆ ಕಬ್ಬು ಪೂರೈಸಲು ಹೊರಟಿದ್ದ ಟ್ರ್ಯಾಕ್ಟರ್ಗಳ ಟಯರ್ಗಳ ಗಾಳಿ ತೆಗೆದು ಪ್ರತಿಭಟನೆ
ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಶೇಡಬಾಳ
ರೈಲು ನಿಲ್ದಾಣದ ಹತ್ತಿರ ಕಬ್ಬು
ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಟಯರ್ಗಳ ಗಾಳಿ ತೆಗೆದು ಪ್ರತಿಭಟಿಸಿದರು.
ತಾಲೂಕಿನ
ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆ ರೈತರ ಕಬ್ಬಿಗೆ 2900 ರೂ
ನೀಡಿದೆ. ಅಲ್ಲದೆ ಪಕ್ಕದ ಮಹಾರಾಷ್ಟ್ರದ ಕಾಖರ್ಾನೆಗಳು 2900 ರಿಂದ 3100 ರೂ ವರೆಗೆ ದರ
ನೀಡಿರುವಾಗ ಅಥಣಿ ತಾಲೂಕಿನ ನಾಲ್ಕು
ಕಾಖರ್ಾನೆಗಳು ತಮ್ಮ ಮನಸ್ಸಿಗೆ ಬಂದಂತೆ
ದರ ನೀಡಿವೆ. ಆ ವ್ಯತ್ಯಾಸದ ಹಣವನ್ನು
ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ಮಾದರಿಯಲ್ಲಿ ಕೂಡಲೇ ಪಾವತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೆ,
ಕೆಲ ಕಾಖರ್ಾನೆಗಳು ರೈತರಿಂದ ಕಬ್ಬು ಪೂರೈಕೆಗೆ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದ ಪರಿಣಾಮ, ಹಲವರು ಕಬ್ಬು ಸಾಗಾಟಕ್ಕೆ ಮುಂದಾಗಿದ್ದರು. ಆದರೆ, ಪ್ರತಿಭಟನಾನಿರತ ರೈತರು ಇದಕ್ಕೆ ಅವಕಾಶ ಕೊಡದೇ, ಟ್ರ್ಯಾಕ್ಟರ್ಗಳ ಮೂಲಕ ಕಾಖರ್ಾನೆಗಳಿಗೆ ಕಬ್ಬು
ಪೂರೈಕೆಯಾಗದಂತೆ ತಡೆಯೊಡಿರುವುದು ಹೊಸ ಬೆಳವಣಿಗೆ ಆಗಿದೆ.