ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ ಕೊಡುವಂತೆ ಆಗ್ರಹ

ಲೋಕದರ್ಶನ ವರದಿ

ಬೆಳಗಾವಿ 4, ನಗರದ ಸಕ್ಯೂಟ್ ಹೌಸ್ನಲ್ಲಿ ರವಿವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ರೈತರು ಅನುಭವಿಸುವ ಕಷ್ಟಗಳಿಗೆ ಸರಕಾರ ಸ್ಪಂದಿಸಿ ಕಬ್ಬಿನ ಹಣ ಪಾವತಿಸದಿರುವ ಕಾಖರ್ಾನೆ ಮಾಲೀಕರಿಗೆ ಕಠಿಣ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವಂತೆ ಕಠೋರ ಕಾನೂನು ಜಾರಿಗೆ ತರಬೇಕೆಂದು ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಸರಕಾರಕ್ಕೆ ಒತ್ತಾಯಿಸಿದರು.

ಕಾಖರ್ಾನೆಗಳು ಸಕ್ಕರೆಯನ್ನು ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಿ ಉತ್ತಮ ಲಾಭ ಗಳಿಸುತ್ತಿದ್ದರೂ, ರೈತರಿಗೆ ಕೊಡಬೇಕಾದ ಕಬ್ಬಿನ ಬಾಕಿ ಹಣವನ್ನು ಮಾತ್ರ ಕೊಡದೆ ಪೀಡಿಸುತ್ತಿರುವುದು ರೈತರ ಆಕ್ರೋಶಕ್ಕೆ ಎಡೆ ಮಾಡಿ ಕೊಟ್ಟಿದೆ. ಆದಕಾರಣ ರಾಜ್ಯ ಸರಕಾರ ಎಸ್.ಎ.ಪಿ. ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಕಬ್ಬಿನ ಬಾಕಿ ಕೊಡದ ಕಾಖರ್ಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಅವರು ಒತ್ತಾಯಿಸಿದರು.

ಕಬ್ಬಿನಿಂದ ಇಥೆನಾಲ್ ಉತ್ಪಾದಿಸುವ ಸಕ್ಕರೆ ಕಾಖರ್ಾನೆಗಳಿಗೆ ಅಪಾರ ಆದಾಯವಿರುತ್ತದೆ. ಆದಾಗ್ಯೂ ರೈತರ ಬಾಕಿ ಹಣ ಪಾವತಿಸಲಾರದೆ, ರೈತರನ್ನು ಸತಾಯಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಪ್ರತಿ ಟನ್ ಕಬ್ಬಿಗೆ ರೂ. 4000/- ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಬೆಲ್ಲದ ಗಾಣಗಳಿಂದ ಎಥೆನಾಲ್ ಉತ್ಪ|ಆದನೆಗೆ ಅವಕಾಶ ಕಲ್ಪಿಸಲು ಕಾಯಿದೆ ಜಾರಿಗೆ ತರಬೇಕು ಎಂದು ಅವರು ಹೇಳಿದರು. 

ಅಲ್ಲದೇ ಕೆಲವೊಂದು ಕಾಖರ್ಾನೆಗಳು ತಾವು ಉತ್ಪಾದಿಸಲಾಗುವ ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸಿ ಸರಕಾರಕ್ಕೆ ವಂಚಿಸುತ್ತಿದ್ದಾರೆ. ಹಾಗಾಗಿ ರೈತನ ಪ್ರತಿ ಹೊಲದ ಕಬ್ಬಿನ ಇಳುವರಿಯನ್ನು ಪರೀಕ್ಷಿಸಿ ಕಬ್ಬಿನ ದರ ಪಾವತಿಸುವಂತಾಗಲು ಕೇಂದ್ರ ಸರಕಾರ ಎಫ್.ಆರ್.ಪಿ. ಕಾಯ್ದೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು. 

ರೈತರ ಸಾಲ ಮನ್ನಾ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು ಅವು ಯಾವುದೇ ರೀತಿಯಲ್ಲಿ ಕಾರ್ಯರೂಪಕ್ಕೆ ಬಾರದೇ ಇರುವುದು ವಿಷಾದನೀಯ ಸಂಗತಿ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಯಾಜ್ಯ ಉಪಾಧ್ಯಕ್ಷ ಬಾಬು ಉಪಾಸಿ, ಜಿಲ್ಲಾಧ್ಯಕ್ಷ ಈರಣ್ಣ ಅರಳಿಕಟ್ಟಿ, ಪ್ರಧಾನ ಕಾರ್ಯದಶರ್ಿ ಪ್ರವೀಣ ಸರದಾರ ಹಾಗೂ ಎಸ್.ಬಿ. ಸಿದ್ನಾಳ, ರೈತ ಮುಖಂಡರಾದ ಶಾಸಪ್ಪ ನಾವಿ, ಶಂಕರಗೌಡ ಹೊಸಗೌಡ್ರ. ಸುರೇಶ ಮಲ್ಲನಗೌಡ ಪಾಟೀಲ, ಮಾರುತಿ ನಲವಾಡೆ, ಪಂಚಪ್ಪ ಗಂಗಣ್ಣವರ ಮತ್ತಿತರು ಹಾಜರಿದ್ದರು.