ಅವ್ಯವಹಾರ ತಡೆಗೆ ವಿದ್ಯಾಥರ್ಿಗಳಲ್ಲಿ ಪ್ರಾಮಾಣಿಕತೆ ಬಿಂಬಿಸಿ ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಶ್ರೀಮಂತ ಪಾಟೀಲ

31 ಶಿಕ್ಷಕರಿಗೆ "ಗುರುಶ್ರೀ" ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಸಿದಗೌಡಾ ಪಾಟೀಲ, ಡಿ.


 ಕಾಗವಾಡ 31: ರಾಜ್ಯ ಹಾಗೂ ದೇಶದಲ್ಲಿ ಸಾಮಾನ್ಯ ಜನರಿಗೆ ಜೀವನ ಸಾಗಿಸಲು ಅಷ್ಟೇನು ಸರಿಯಾದ ಸ್ಥಿತಿಗತಿ ಉಳದೆಯಿಲ್ಲಾ. ಸ್ವಾರ್ಥಕ್ಕಾಗಿ ಎಲ್ಲಡೆ ಅವ್ಯವಹಾರ ಹೆಚ್ಚಿಸಿದೆ. ಅದನ್ನು ನಿಯಂತ್ರಣದಲ್ಲಿ ಇಡುವದಾದರೆ, ಎಲ್ಲ ಶಾಲೆಗಳ ಶಿಕ್ಷಕರು ಪ್ರಮಾಣಿಕವಾಗಿ ಪ್ರಯತ್ನಿಸಿ, ವಿದ್ಯಾಥರ್ಿಗಳಲ್ಲಿ ಪ್ರಾಮಾಣಿಕತೆ ಬಿಂಬಿಸಿದರೆ ಮಾತ್ರ ಸಾಧ್ಯವಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಸೋಮವಾರ ಸಂಜೆ ಕಾಗವಾಡದ ಮಲ್ಲಿಕಾಜರ್ುನ ವಿದ್ಯಾಲಯದ ಸಭಾಭನದಲ್ಲಿ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಡಾ. ಎಚ್.ಎಫ್.ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಕಾಯರ್ಾಲಯ ಮತ್ತು ಕಾಗವಾಡದ ವಿದ್ಯಾವರ್ಧಕ ಶಿಕ್ಷಣ ಸಮೀತಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ "ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ಪುರಸ್ಕಾರ" ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ಮಾಚರ್್ 2018ರ ಎಸ್.ಎಸ್.ಎಲ್.ಸಿ ವರ್ಗದಲ್ಲಿ ಪರಿಶ್ರಮ ಮಾಡಿ ಕಲಿಸುವ ವಿಷಯಗಳಲ್ಲಿ ಕಾಗವಾಡ, ಅಥಣಿ, ರಾಯಬಾಗ ತಾಲೂಕಿನ ಗರಿಷ್ಠ ಸರಕಾರಿ ಅಂಕ ಗಳಿಸಿದ ಗುರು ವೃಂದಕ್ಕೆ ಗೌರವ ಸಲ್ಲಿಕೆ ಮತ್ತು ವ್ಹಿ.ವ್ಹಿ. ಸಮೀತಿ ಒಕ್ಕುಟ ಕಾಗವಾಡ ಇವರಿಂದ ಅಂಗಸಂಸ್ಥೆಗಳ ಶಿಕ್ಷಕರಿಗೆ "ಗುರುಶ್ರೀ" ಪ್ರಶಸ್ತಿಗಳ ಪುರಸ್ಕಾರ ನೀಡುವ ಕಾರ್ಯಕ್ರಮ ಜರುಗಿತು. 

ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ದತ್ತಿ ಮಲ್ಲಿಕಾಜರ್ುನ ವಿದ್ಯಾಲಯದ ಆದರ್ಶ ಶಿಕ್ಷಕ ದಿ. ಪ್ರಭಾಕರ ನಾರಾಯಣ ಶೇಡಬಾಳ್ಕರ್ ಇವರ ಬಗ್ಗೆ ರಚಿಸಿದ "ಜೀವವೀಣೆ ಕನ್ನಡ ಸಂಕಲನ" ರೋಹಿತ ಸುಭಾಷ ಅವಟೆ ಕವಿ ಇವರು ರಚಿಸಿದ ಗ್ರಂಥ ಬಿಡುಗಡೆಯಾಯಿತು. 

ಕಾಗವಾಡದ ವಿ.ವಿ.ಎಸ್. ಶಿಕ್ಷಣ ಸಮಿತಿ ಅಧ್ಯಕ್ಷ ಸಿದಗೌಡಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಡಿ.ಡಿ.ಪಿ.ಐ ಎಂ.ಜಿ.ದಾಸರ್, ನಿವೃತ್ ಡಿ.ಡಿ.ಪಿ.ಐ ಬಿ.ಆರ್.ಗಂಗಪ್ಪನವರ, ಧಾರವಾಡದ ಕಟ್ಟಿಮನಿ ಪ್ರತಿಷ್ಠಾನದ ಗೌರವ ಸಂಯೋಜಕ ಶಿವಶಂಕರ ಹಿರೇಮಠ, ಬೇಡಿಕೆಹಾಳ ಕಾಲೇಜಿನ ನಿವೃತ್ ಪ್ರಾಚಾರ್ಯ ಕೆ.ಕೆ.ಮೈಶಾಳೆ, ಡಾ. ವಿನಯ ಶೇಡಬಾಳಕರ್(ಮುಂಬಯಿ), ಸ್ಮೀತಾ ಆನಿಖಿಂಡಿ(ಮಿರಜ), ರಾಯಬಾಗ ಬಿ.ಇ.ಒ ಸಿ.ಆರ್.ಓಣಿ, ಅಥಣಿ ಬಿ.ಇ.ಒ ಸಿ.ಎಂ.ನ್ಯಾಮಗೌಡರ, ಕಾಗವಾಡ ಬಿ.ಇ.ಒ ಎ.ಎಸ್.ಜೋಡಗೇರಿ, ನಿವೃತ್ ನ್ಯಾಯಾಧಿಶ ಪ್ರಕಾಶ ಕಠಾರೆ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ "ಗುರುಶ್ರೀ" ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ದತ್ತಿಯ ಪ್ರಶಸ್ತಿ ವಿಜೇತರಾದ ಕಾಗವಾಡ ಬಿ.ಇ.ಒ ಕಾಯರ್ಾಲಯ ವ್ಯಾಪ್ತಿಯ ಶಿಕ್ಷಕರಾದ ಎಸ್.ಕೆ.ಮಾಲಗಾಂವೆ(ಪ್ರಥಮ ಭಾಷೆ), ಎಸ್.ಕೆ.ಹವಲೆ(ದ್ವಿತೀಯ ಭಾಷೆ), ಎಸ್.ಎಂ.ಬೆಳಕೂಡ್(ತೃತೀಯ ಭಾಷೆ), ಶ್ರೀಮತಿ ವಿ.ಪಿ.ಪೋತದಾರ್(ಗಣಿತ), ಪಿ.ಆರ್.ಮೋಳೆ(ವಿಜ್ಞಾನ), ಆರ್.ಎಸ್.ಹೋಸಮನಿ(ಸಮಾಜ ವಿಜ್ಞಾನ), ಎಸ್.ಎಸ್.ಎಲ್.ಸಿಯಲ್ಲಿ 99.4 ಅಂಕುಗಳಿಸಿದ ಐನಾಪುರದ ಕೆ.ಆರ್.ಇ.ಎಸ್ ಸಂಸ್ಥೆಯ ಲಕ್ಷ್ಮಿ ಹನಮಂತ ಕೊರಬು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 

ಇದೇ ರೀತಿ ರಾಯಬಾಗ ಮತ್ತು ಅಥಣಿ ತಾಲೂಕಿನ ಶಿಕ್ಷಕರು ಹಾಗೂ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. ಧಾರವಾಡದ ಕಟ್ಟಿಮನಿ ಪ್ರತಿಷ್ಠಾನದ ಎಸ್.ಬಿ.ಕೊಡ್ಲಿ, ಕಾಗವಾಡ ದಹಿಕ ಪರಿವೇಕ್ಷಕ ಸಿ.ಎಂ.ಸಾಂಗಲೆ, ಬಿ.ಇ.ಒ ಎ.ಎಸ್.ಜೋಡಗೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.