ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ

ಬೆಳಗಾವಿ, ಡಿ.10-  ಸಮ್ಮಿಶ್ರ ಸಕರ್ಾರದ ಚೊಚ್ಚಲ ಚಳಿಗಾಲ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸುವರ್ಣಸೌಧ ಸಜ್ಜುಗೊಂಡಿದೆ.

ಕಬ್ಬು ಬೆಳೆಗಾರರು, ರೈತರು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು  ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ 4874 ಪೊಲೀಸ್ ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ.

ಮಹಾನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ. ರಾಜಪ್ಪ ಭದ್ರತೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಇವರ ಜತೆಗೆ 7 ಜನ ಎಸ್ಪಿ, 11 ಜನ ಹೆಚ್ಚುವರಿ ಎಸ್ಪಿ, 34 ಜನ ಡಿವೈಎಸ್ಪಿ, 81 ಜನ ಪಿಐ, 227 ಜನ ಪಿಎಸ್ಐ, 23 ಜನ ಮಹಿಳಾ ಪಿಎಸ್ಐ, 251 ಜನ ಎಎಸ್ಐ, 4071 ಜನ ಪೊಲೀಸ್ ಕಾನ್ಸ್ಟೆಬಲ್, 168 ಮಹಿಳಾ ಪೇದೆಗಳು ಸೇರಿದಂತೆ ಒಟ್ಟು 4878 ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಬಿಜೆಪಿಯಿಂದ ನಡೆಯುವ ರೈತರ ಬೃಹತ್ ಸಮಾವೇಶ ಸೇರಿದಂತೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರಸ್ವರೂಪ ಪಡೆಯಲಿದೆ. ಹೀಗಾಗಿ ಅಗತ್ಯ ಪೊಲೀಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸುವರ್ಣಸೌಧ ಕಟ್ಟಡ ಮತ್ತು ಆವರಣ, ಸುವರ್ಣಸೌಧದ ಮುಖ್ಯಗೇಟ್ ಮತ್ತು ಹೊರ ಆವರಣ, ಕೊಂಡಸಕೊಪ್ಪ ರೈತರ ಪ್ರತಿಭಟನೆ ಸ್ಥಳ, ಸುವರ್ಣಸೌಧ ಪ್ರತಿಭಟನೆ ಸ್ಥಳ, ನಾಕಾಬಂಧಿ, ಚೆಕ್ಪೋಸ್ಟ್, ವಿವಿಐಪಿ ಸಂಚರಿಸುವ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ, ಮುಖ್ಯಮಂತ್ರಿ ವಾಸ್ತವ್ಯ ಮಾಡುವ ವಿಟಿಯು ಬಳಿ ಭದ್ರತೆ, ಗಣ್ಯವ್ಯಕ್ತಿಗಳು ವಾಸ್ತವ್ಯ ಮಾಡುವ ಸಕ್ರ್ಯೂಟ್ ಹೌಸ್, ಸಾಂಬ್ರಾ ವಿಮಾನ ನಿಲ್ದಾಣ, ಬಿಜೆಪಿಯಿಂದ ರೈತರ ಸಮಾವೇಶ ಹಾಗೂ ಮಹಾಮೇಳಾವ್ ಸೇರಿದಂತೆ ಇನ್ನಿತರ ಕಡೆ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ.

ಭದ್ರತೆಗೆ ಹೊರಗಡೆಯಿಂದ ಆಗಮಿಸಿರುವ ಎಲ್ಲ ಪೊಲೀಸರಿಗೆ ಕೆಐಎಡಿಬಿ ಹಾಲ್ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಪೊಲೀಸರಿಗೂ ಉತ್ತಮ ಸೌಲಭ್ಯ:

ಅಧಿವೇಶನದ ವೇಳೆ ಭದ್ರತೆ ನೀಡಲು ಬೆಳಗಾವಿಗೆ ನಾನಾ ಕಡೆಗಳಿಂದ ಆಗಮಿಸಿರುವ ಪೊಲೀಸರಿಗೂ ಈ ಭಾರಿ ಉತ್ತಮ ಭದ್ರತೆ ಒದಗಿಸಲಾಗಿದೆ.ಕಳೆದ ಅಧಿವೇಶನದ ವೇಳೆ ಭದ್ರತೆ ನೀಡುವ ಸಿಬ್ಬಂದಿಗೆ ಸರಿಯಾದ ವಸತಿ ವ್ಯವಸ್ಥೆಯನ್ನು ಸಕರ್ಾರ ಕಲ್ಪಿಸಿಕೊಟ್ಟಿರಲಿಲ್ಲ. ಕೊನೆಗೂ ಸಕರ್ಾರ ಎಚ್ಚೆತ್ತಿದೆ. ಈ ಬಾರಿ ಅಧಿವೇಶನದಲ್ಲಿ ಪೊಲೀಸರಿಗೆ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಕಳೆದ ಮೂರು ವರ್ಷಗಳಿಂದ ಅಧಿವೇಶನಕ್ಕೆ ಬೆಳಗಾವಿಗೆ ಆಗಮಿಸುತ್ತಿದ್ದ  ಪೊಲೀಸರು ಪರದಾಡುವ ಪರಿಸ್ಥಿತಿ ಇತ್ತು. ಬೆಳಗ್ಗೆ ಎದ್ದ ತಕ್ಷಣ  ಶೌಚಾಲಯ, ಕುಡಿಯುವ ನೀರು, ಸ್ನಾನಕ್ಕೆ ಬಿಸಿನೀರು ದೂರದ ಮಾತಾಗಿತ್ತು. ರಾತ್ರಿ ವೇಳೆ ನಿದ್ರಿಸಲು ಸರಿಯಾದ ವ್ಯವಸ್ಥೆಯೇ ಇರುತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು.ಆದರೆ, ಈ ಬಾರಿ ಸಕರ್ಾರ ಜಾಗೃತವಾಗಿದೆ. ಬೆಳಗಾವಿಯ ಆಟೋನಗರದಲ್ಲಿ ವಸತಿ, ಕುಡಿಯಲು ಶುದ್ದ ನೀರು, ಸ್ನಾನಕ್ಕೆ ಬಿಸಿನೀರು ವ್ಯವಸ್ಥೆ ಮಾಡಲಾಗಿದೆ. ಇನ್ನು, ಜಿಲ್ಲಾಡಳಿತದ ವತಿಯಿಂದ ಶೌಚಾಲಯ ನಿಮರ್ಿಸಲಾಗಿದೆ.   ಪ್ರತಿಯೊಬ್ಬರಿಗೂ ಚಾಪೆ, ಸ್ನಾನಕ್ಕೆ ಬಕೆಟ್ ನೀಡಲಾಗಿದೆ. ಈ ಮೂಲಕ ಅನೇಕ ವರ್ಷಗಳಿಂದ ಪೊಲೀಸರು ಎದುರಿಸುತ್ತಿದ್ದ ಸಮಸ್ಯೆಯನ್ನು ಸಕರ್ಾರ ಪರಿಹಾರ ಮಾಡಿದೆ.