ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರವಾಸ

Deputy Chief Minister DK Shivakumar's visit

ಲೋಕದರ್ಶನ ವರದಿ 

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರವಾಸ  

ಬಳ್ಳಾರಿ  15: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೇ 16 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. 

ಮೇ 16 ರಂದು ಬೆಳಿಗ್ಗೆ 09.30 ಗಂಟೆಗೆ ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು ಬೆಳಿಗ್ಗೆ 10.30 ಕ್ಕೆ ತೋರಣಗಲ್‌ನ ಜಿಂದಾಲ್ ಏರ್‌ಸ್ಟ್ರಿಪ್ ಗೆ ಆಗಮಿಸುವರು. 

ನಂತರ ಬೆಳಿಗ್ಗೆ 10.35 ಗಂಟೆಗೆ ತೋರಣಗಲ್‌ನ ಜಿಂದಾಲ್ ಏರ್‌ಸ್ಟ್ರಿಪ್‌ನಿಂದ ರಸ್ತೆಯ ಮೂಲಕ ಹೊರಟು, 11 ಗಂಟೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಆಗಮಿಸಿ, ಮೇ 20 ರಂದು ರಾಜ್ಯ ಸರ್ಕಾರವು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವ ಸ್ಥಳ ಪರೀಶೀಲನೆ ನಡೆಸುವರು. 

ಬಳಿಕ ಮಧ್ಯಾಹ್ನ 02.30 ಗಂಟೆಗೆ ಅಲ್ಲಿಂದ ಹೊರಟು, 02.55 ಗಂಟೆಗೆ ತೋರಣಗಲ್‌ನ ಜಿಂದಾಲ್ ಏರ್‌ಸ್ಟ್ರಿಪ್‌ಗೆ ಆಗಮಿಸಿ, 03 ಗಂಟೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು ಎಂದು ಉಪ ಮುಖ್ಯಮಂತ್ರಿಯವರ  ಹೆಚ್ಚುವರಿ ಆಪ್ತ ಕಾರ್ಯದರ್ಶಿ ಬಿ.ಎಸ್‌.ಶ್ರೀಧರ್ ಅವರು ತಿಳಿಸಿದ್ದಾರೆ.