ದೇವರಹಿಪ್ಪರಗಿ ನೂತನ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ

Devarhipparagi new taluk first literature conference

ದೇವರಹಿಪ್ಪರಗಿ ಪಟ್ಟಣದಲ್ಲಿ ಇಂದು ಅಕ್ಷರ ಜಾತ್ರೆ ಽ ಸರ್ವಾಧ್ಯಕ್ಷ ಸಂಗಮೇಶ ಕರೆಪ್ಪಗೋಳ ನೇತೃತ್ವದಲ್ಲಿ ಸಮ್ಮೇಳನ 

ದೇವರಹಿಪ್ಪರಗಿ 02: ನೂತನ  ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಬೆಳಿಗ್ಗೆ  ಆರಂಭವಾಗಲಿದ್ದು, ಪಟ್ಟಣದ ಬಿ ಎಲ್ ಡಿ ಇ ಶಾಲಾ ಮೈದಾನದಲ್ಲಿ ಶರಣ ಮಡಿವಾಳ ಮಾಚಿದೇವರ ನಾಡಿನಲ್ಲಿ ಕನ್ನಡ ಕಲರವ. ಪಟ್ಟಣದ ಬಿ ಎಲ್ ಡಿ ಇ ಸಂಸ್ಥೆಯ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8.00ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಕಸಾಪ ಗೌರವಾಧ್ಯಕ್ಷರಾದ ಎಂ.ಎಚ್‌.ವಾಲಿಕಾರ, ನಾಡ ಧ್ವಜಾರೋಹಣವನ್ನು ಕಸಾಪ ಗೌರವ ಸಲಹೆಗಾರರಾದ ಡಾ.ಆರ್‌.ಆರ್‌.ನಾಯಕ, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ತಾಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ನೆರವೇರಿಸಿದರು. ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನದ ಅಧ್ಯಕ್ಷ ಸಂಗಮೇಶ ಕರೆಪ್ಪಗೋಳ ಅವರ ಮೆರವಣಿಗೆಯು ಮಡಿವಾಳ ಮಾಚಿದೇವರ ದೇವಸ್ಥಾನದಿಂದ ಬಿ ಎಲ್ ಡಿ ಇ ಸಂಸ್ಥೆ ಮೈದಾನದವರೆಗೆ ಡೊಳ್ಳು ಕುಣಿತ, ವೀರಗಾಸೆ, ಹಲಗೆ ಸೇರಿದಂತೆ ವಿವಿಧ ಕಲಾತಂಡ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಧಾನ ವೇದಿಕೆಗೆ ತಲುಪಲಿದೆ.  

ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯಶ್ರೀ ಮ.ನಿ.ಪ್ರ ಮಡಿವಾಳೇಶ್ವರ ಮಹಾ ಸ್ವಾಮೀಜಿ, ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಹಾಸಿಂಪೀರ ವಾಲಿಕಾರ ವಹಿಸಿದ್ದರು. ಸಮ್ಮೇಳನದ ಉದ್ಘಾಟಕರಾಗಿ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಉದ್ಘಾಟಿಸುವರು. ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ನೇರವೆರಿಸಲಿದ್ದಾರೆ. ಮಧ್ಯಾಹ್ನದ ಶರಣರ ಘೋಷ್ಠಿ-1 ಗೋಷ್ಠಿಯ ಸಾನಿಧ್ಯವನ್ನು ನಿವಾಳಖೇಡದ ಪ.ಪೂ ಬಸವಾನಂದ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಅಶೋಕ ಹೆಗಡೆ, ಉದ್ಘಾಟನೆಯನ್ನು ವಿಜಯಪುರ ನ್ಯಾಯವಾದಿಗಳಾದ ಮಹ್ಮದಗೌಸ್ ಹವಾಲ್ದಾರ, ಮಡಿವಾಳ ಮಾಚಿದೇವರು ಹಾಗೂ ಮೊಹರೆ ಹನುಮಂತ ರಾಯರ ಜೀವನ ಚರಿತ್ರೆಯ ಕುರಿತು ಸಾಹಿತಿಗಳಾದ ಶ್ರೀಧರ ಆಸಂಗಿಹಾಳ ಹಾಗೂ ಎಸ್‌.ಎನ್‌. ಬಸವರೆಡ್ಡಿ ಉಪನ್ಯಾಸ ನೀಡಲಿದ್ದಾರೆ. ನಂತರ ಕವಿ ಗೋಷ್ಠಿ-2 ಸಾನಿಧ್ಯವನ್ನು ಸದಯ್ಯನ ಮಠದ ಶ್ರೀ ಷ.ಬ್ರ. ವೀರಗಂಗಾಧರ ಶಿವಾಚಾರ್ಯರು, ಉದ್ಘಾಟನೆಯನ್ನು ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಹಸನೂರ, ಅಧ್ಯಕ್ಷತೆ ನಿವೃತ್ತ ಪ್ರಾಚಾರ್ಯರಾದ ಡಾ.ವ್ಹಿ.ಡಿ.ಐಹೊಳ್ಳಿ ವಹಿಸುವರು.  

ಸಾಯಂಕಾಲದ ಗೋಷ್ಠಿ-3 ಜಾನಪದ ಸಂಭ್ರಮ ಹಾಗೂ ಬಂಡಾಯ ಸಾಹಿತ್ಯದ ಸಾನಿಧ್ಯವನ್ನು ಜಡಿಮಠದ ಶ್ರೀ ಷ.ಬ್ರ. ಜಡಿಸಿದ್ದೇಶ್ವರ ಶಿವಾಚಾರ್ಯರು ಹಾಗೂ ಕನ್ನೊಳ್ಳಿ ಮಠದ ಪೂಜ್ಯಶ್ರೀ ಷ.ಬ್ರ ಸಿದ್ದಲಿಂಗ ಶಿವಾಚಾರ್ಯರು, ಉದ್ಘಾಟಕರಾಗಿ ಬೆಂಗಳೂರು ವೃತ್ತ ನೀರೀಕ್ಷಕರಾದ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ, ಅಧ್ಯಕ್ಷತೆ ಸಾಹಿತಿ ರಾವುತ್ ತಳಕೇರಿ, ಉಪಸ್ಥಿತಿ ಹಿರಿಯ ಬಂಡಾಯ ಸಾಹಿತಿಗಳಾದ ವೈ.ಸಿ.ಮಯೂರ, ಉಪನ್ಯಾಸ ಜಿಲ್ಲಾ ಜಾನಪದ ಅಧ್ಯಕ್ಷರಾದ ಬಾಳನಗೌಡ ಪಾಟೀಲ ಹಾಗೂ ಸಾಹಿತಿ ಅಶೋಕ ಹಂಚಲಿ ಭಾಗವಹಿಸಲಿದ್ದಾರೆ, ಹಾಗೂ ಅತಿಥಿಗಳು ಭಾಗವಹಿಸಲಿದ್ದಾರೆ. ಸಂಜೆ ಬಹಿರಂಗ ಅಧಿವೇಶನದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪದಾಧಿಕಾರಿಗಳು ಹಾಗೂ ಸದಸ್ಯರು ನೇತೃತ್ವದಲ್ಲಿ ನಿರ್ಣಯ ಮಂಡಿಸಲಿದ್ದಾರೆ. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಗುವುದು. ಸಂಜೆ 7.30ಕ್ಕೆ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಕೆರೂಟಗಿ ಹಿರೇಮಠದ ಪ.ಪೂ. ಶಿವಬಸವ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಮಾಜಿ ಶಾಸಕ ಶರಣಪ್ಪ ಸುಣಗಾರ ಸೇರಿದಂತೆ ಅತಿಥಿಗಳು ಭಾಗವಹಿಸಲಿದ್ದಾರೆ.ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ.ಷ.ಬ್ರ. ಮುರಾಳ ಮಹಾಂತ ಶಿವಾಚಾರ್ಯರು. ಉದ್ಘಾಟಕರಾಗಿ ಕೆಪಿಸಿಸಿ ಸದಸ್ಯರಾದ ಬಿ.ಎಸ್‌. ಪಾಟೀಲ(ಯಾಳಗಿ), ಅಧ್ಯಕ್ಷತೆಯನ್ನು ಉದ್ಯಮಿಗಳಾದ ಆನಂದಗೌಡ ದೊಡ್ಡಮನಿ ಹಾಗೂ ಅತಿಥಿಗಳಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಜಿ.ಪಿ.ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.