ರೈತರಿಗೆ ಅಭಿವೃದ್ಧಿಯೇ ನಮ್ಮ ದೇಶದ ಅಭಿವೃದ್ಧಿ ಶಾಸಕ ಬಸವರಾಜ ಶಿವಣ್ಣನವರ

Development for farmers is the development of our country, says MLA Basavaraja Shivanna

 ಬ್ಯಾಡಗಿ 10 :  ರೈತನು ತಾನು ಹೊಸ ಹೊಸ ತಂತ್ರಜ್ಞಾನಗಳನ್ನು ಬೆಳೆಸಿ, ಕೃಷಿಯನ್ನು ಕೃಷಿಯಲ್ಲಿ ಸಾಧನೆ ಮಾಡಿ ಹೆಚ್ಚಿನ ಲಾಭ ಪಡೆದು ದೇಶಕ್ಕೆ ಅನ್ನ ನೀಡುತ್ತಾನೋ ಅವನ ಅಭಿವೃದ್ಧಿ ನಮ್ಮ ದೇಶದ ಅಭಿವೃದ್ಧಿ ಎಂದು ಶಾಸಕ ಬಸವರಾಜ್ ಶಿವಣ್ಣನವರು ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ವಿವಿಧ ಕೃಷಿ ಯಂತ್ರೋಪಕರಣಗಳ ವಿತರಿಸಿ ಮಾತನಾಡಿದವರು ರೆ?ತರಿಗೆ ತಮ್ಮ ಕೃಷಿ ವೆಚ್ಚವನ್ನು ಕಡಿಮೆಗೊಳಿಸಿ ಹೆಚ್ಚಿನ ಪ್ರಮಾಣದ ಲಾಭವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ನಾನಾ ಅಧುನಿಕ ಯಂತ್ರಪೊ?ಕರಣಗಳನ್ನು ರೆ?ತರಿಗೆ ರಿಯಾಯತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ ಅದರ  ಸದುಪಯೋಗ ತೆಗೆದುಕೊಂಡು ದೇಶದ ಅಭಿವೃದ್ಧಿಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು. ಕೃಷಿ ಇಲಾಖೆಯಿಂದ ರೈತರಿಗೆ ಬಹಳಷ್ಟು ಯೋಜನೆಗಳಿದ್ದು ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗುವಂತಾಗಬೇಕು ಅಲ್ಲದೆ ದಲ್ಲಾಳಿಗಳಿಗೆ ಅವಕಾಶ ನೀಡದಂತೆ ಕೃಷಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.ಈ ವೇಳೆ ತಾಲೂಕಿನ ನಾನಾ ಗ್ರಾಮಗಳ ಪ.ಜಾತಿ, ಪ.ಪಂಗಡ ಫಲಾನುಭವಿಗಳಿಗೆ ಕೃಷಿ ಯಂತ್ರೊ?ಪಕರಣಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ.ಗಂಗಣ್ಣ ಎಲಿ.ಬಸವರಾಜ ಸಂಕಣ್ಣನವರ. ಆಶ್ರಯ ಸಮಿತಿಯ ಅಧ್ಯಕ್ಷ ಅಬ್ದುಲ್ ಮುನಾಫ್ ಏರಿಸಿಮಿ.ದುರ್ಗೆಶ ಗೋಣೆಮ್ಮನವರ್ .ತಾಲೂಕು ಸಹಾಯಕ ಕೃಷಿ ನಿರ್ದೇಶಕ ಗಣೇಶ್ ಕುಮ್ಮಾರ, ಕೃಷಿ ಅಧಿಕಾರಿ ನಾಗರಾಜ್ ಬನ್ನಿಹಟ್ಟ, ಹಾಗೂ ರೈತರು ಉಪಸ್ಥಿತರಿದ್ದರು.