ದೇವರ ದಾಸಿಮಯ್ಯ ಜಯಂತ್ಯೋತ್ಸವ ದತ್ತಿ ಕಾರ್ಯಕ್ರಮ

Devora Dasimayya Jayantiotsava Charity Program

ದೇವರ ದಾಸಿಮಯ್ಯ ಜಯಂತ್ಯೋತ್ಸವ ದತ್ತಿ ಕಾರ್ಯಕ್ರಮ

ಧಾರವಾಡ 04: ಕುಶಲಕರ್ಮಿಗಳಿಗೆ ಏಕಾಗ್ರತೆ ಹಾಗೂ ಸಮನ್ವಯತೆ ಮುಖ್ಯ. ಕುಶಲಕರ್ಮಿಗಳು ಉತ್ಪಾದಿಸುವ ವಸ್ತುಗಳಲ್ಲಿ ಚಲನಶೀಲ ತತ್ವವಿದೆ ಎಂದು ಹೊಸಪೇಟೆಯ ಸಾಂಸ್ಕೃತಿಕ ಚಿಂತಕರೆ ಹಮತ್ ತರೀಕೆರೆ ಅಭಿಪ್ರಾಯಪಟ್ಟರು.ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ದೇವರ ದಾಸಿಮಯ್ಯ ಜಯಂತ್ಯೋತ್ಸವ ದತ್ತಿ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನೇಕಾರ ಸಂಸ್ಕೃತಿ ಹಾಗೂ ಧರ್ಮ’ (ದಾಸಿಮಯ್ಯ, ಕಬೀರ ಹಾಗೂ ಭೀಮಾಂಭಿಕೆ) ವಿಷಯಕುರಿತು ಮಾತನಾಡಿದರು.ಕಲ್ಯಾಣ ಪಟ್ಟಣದಲ್ಲಿ ಸಾಮಾನ್ಯ ವ್ಯಕ್ತಿಗಳು ಗುರುದೀಕ್ಷೆ ಪಡೆದು ಅಸಮಾನ್ಯ ಸಾಧಕರಾಗಿ ಬೆಳೆದರು.ಕಲ್ಯಾಣ ಪಟ್ಟಣವು ಒಂದು ರೀತಿ ಕುಶಲಕರ್ಮಿಗಳ ಕೇಂದ್ರವಾಗಿತ್ತು.ಕುಶಲಕರ್ಮಿಗಳಲ್ಲಿ ಕಾಯಕ ನಿಷ್ಠೆ ಇತ್ತು. ತಮ್ಮ ಕಾಯಕದೊಂದಿಗೆ ವೃತ್ತಿ ಧರ್ಮವನ್ನು ಕಾಪಾಡಿಕೊಂಡು ಬಂದರು. ಈ ಕುಶಲಕರ್ಮಿಗಳು ಬಸವಣ್ಣನವರಿಗೆ ಘನತೆಯನ್ನು ತಂದುಕೊಟ್ಟರು. ನೇಕಾರಿಕೆಯಂತಹ ವೃತ್ತಿಯಲ್ಲಿ ಸಮನ್ವಯತೆ ಬಹಳ ಮುಖ್ಯ. ಸಾಮರಸ್ಯದಿಂದ ಮಾತ್ರ ಗುಣಮಟ್ಟದ ವಸ್ತುಗಳು ಉತ್ಪಾದನೆ ಮಾಡಲು ಸಾಧ್ಯ.ರವೀಂದ್ರನಾಥ ಠಾಕೂರರ ಶಾಂತಿ ನಿಕೇತನ ಹಾಗೂ ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿ ಕರಕುಶಲಕರ್ಮಿಗಳಿಗೆ ವೃತ್ತಿ ತರಬೇತಿಯನ್ನು ನೀಡಲಾಗುತ್ತಿತ್ತು. ಮಹಾತ್ಮ ಕಬೀರ, ದೇವರ ದಾಸಿಮಯ್ಯ ಭೀಮಾಂಬಿಕೆ, ಶರಣರು ತಮ್ಮ ವೃತ್ತಿಯೊಂದಿಗೆ ಆ ಕಾಲದಜಾತಿ ಪದ್ಧತಿಯನ್ನೂ ಖಂಡಿಸಿ ಸಾಮಾಜಿಕ ಸಾಮರಸ್ಯತೆಯನ್ನು ಜನಸಾಮಾನ್ಯರಲ್ಲಿ ಬೋಧಿಸಿದರು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಶಾಂತಾ ಇಮ್ರಾಪೂರ ಮಾತನಾಡಿ, ದೇವರ ದಾಸಿಮಯ್ಯ ಶರಣ ಸಂಸ್ಕೃತಿಯಲ್ಲಿ ಮುಂದಿನ ವಚನಕಾರರಿಗೆ ವೈಚಾರಿಕತೆಯ ಬೀಜ ಬಿತ್ತಿದರು. ಅವರ ಚಿಂತನೆಗಳು ಸಮಾಜದಲ್ಲಿ ಸಮಾನತೆ, ಕಾಯಕ ನಿಷ್ಠೆ, ಕಲ್ಪನೆಯನ್ನು ತಂದು ಕೊಟ್ಟವು. ವಚನ ಚಳುವಳಿಗೆ ತಾತ್ವಿಕ ನೆಲೆಗಟ್ಟುತಂದು ಕೊಟ್ಟವರೇ ದೇವರ ದಾಸಿಮಯ್ಯ ಎಂದು ಹೇಳಿದರು. ದತ್ತಿದಾನಿಗಳ ಪರವಾಗಿ ರಾಮಚಂದ್ರ ಗೆದ್ದೆಣ್ಣವರದತ್ತಿ ಆಶಯ ಕುರಿತು ಮಾತನಾಡಿದರು.  ಸತೀಶತುರಮರಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ವಡ್ಡೀನ ನಿರ್ವಹಿಸಿದರು.ಡಾ. ಜಿನದತ್ತ ಹಡಗಲಿ ವಂದಿಸಿದರು. ಬಸವಪ್ರಭು ಹೊಸಕೇರಿ, ಡಾ.ಧನವಂತ ಹಾಜವಗೋಳ, ಪ್ರೊ. ಐ.ಜಿ. ಸನದಿ, ನಿಂಗಣ್ಣಕುಂಟಿ, ಸುರೇಶ ಭಂಡಾರಿ, ಗೆದ್ದೆಣ್ಣವರ ಪರಿವಾರ ಸೇರಿದಂತೆ ಮುಂತಾದವರಿದ್ದರು.