ಹಜರತ್ ಸೈಯ್ಯದ್ ಪೀರ ಮಕ್ತುಂಹುಸೇನಿ ದಗರ್ಾದಲ್ಲಿ ಅದ್ದೂರಿ ಉರುಸ್
ಲೋಕದರ್ಶನ ವರದಿ
ಉಗರಗೋಳ: ಹಿರೇಕುಂಬಿ ಗ್ರಾಮದ ಹಜರತ್ ಸೈಯ್ಯದ್ ಪೀರ ಮಕ್ತುಂಹುಸೇನಿ ದಗರ್ಾದಲ್ಲಿ ಅದ್ದೂರಿಯಾಗಿ ಉರುಸ್ ನಡೆಯಿತು.
ಭಾನುವಾರ ದೇವರಿಗೆ ಗಂಧ ಏರಿಸುವ ಕಾರ್ಯಕ್ರಮ ನಡೆದಿತ್ತು. ಸೋಮವಾರ ದಿನವೀಡಿ ಉರುಸ್ ನಡೆದಿದ್ದು, ರಾಜ್ಯ ಹಾಗೂ ಹೊರರಾಜ್ಯಗಳ ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.
ಹಿರೇಕುಂಬಿ ಗ್ರಾಮದಿಂದ 1.5 ಕಿಮೀ ಎತ್ತರದಲ್ಲಿದೆ ದಗರ್ಾ. ಈ ದಗರ್ಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ದಗರ್ಾದ ಆವರಣವೆಲ್ಲ ಭಕ್ತರಿಂದ ತುಂಬಿ ತುಳುಕುತ್ತಿದ್ದದ್ದು ಕಂಡು ಬಂತು. ಬೆಳಗ್ಗೆಯಿಂದ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಮಳೆಯಲ್ಲೂ ಭಕ್ತರು ನೆನೆಯುತ್ತಲೇ ಗುಡ್ಡವೇರಿ ದೇವರ ದರ್ಶನ ಪಡೆದು ಕೃತಾರ್ಥರಾದರು.
ಉರುಸ್ ಅಂಗವಾಗಿ ದಗರ್ಾದಲ್ಲಿ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನೆರವೇರಿದವು. ಧರ್ಮಗುರುಗಳು ಸಕಲ ಜೀವರಾಶಿಗೆ ಒಳ್ಳೇಯದಾಗಲಿ ಎಂದು ಪ್ರಾಥರ್ಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ತಮ್ಮ ಶಕ್ತ್ಯಾನುಸಾರ ದೇವರಿಗೆ ವಿವಿಧ ಕಾಣಿಕೆ ನೀಡಿ ಭಕ್ತಿ ಸಮಪರ್ಿಸಿದರು.
ಉರುಸ್ಗೆ ಮುಸ್ಲಿಂ ಬಾಂಧವರು ಮಾತ್ರವಲ್ಲ, ಹಿಂದೂಗಳು, ಕ್ರಿಶ್ಚಿಯನ್ನರು ಬಂದು ಪೂಜೆ ಸಲ್ಲಿಸಿದ್ದು ಭಾವೈಕ್ಯತೆ ಸಾರಿತು. ಉರುಸ್ನಲ್ಲಿ ಕವ್ವಾಲಿಗಳು, ಇಸ್ಲಾಂ ಧರ್ಮದ ಸಂದೇಶ ಸಾರುವ ಹಾಡುಗಳು ಅನುರಣಿಸಿದವು.
ಪೀರ ಮಕ್ತುಮಹುಸೇನಿ ದಗರ್ಾದ ಅರ್ಚಕರಾಗಿರುವ ಸೈಯ್ಯದ್ ಇಷರ್ಾದ್ಅಹ್ಮದ್ ಪೀರಜಾದೆ, ಫಾರೂಕ್ ಅಹ್ಮದ್ ಪೀರಜಾದೆ, ಬೆಳವಡಿಯ ಫಕೀರರಾದ ಇಮಾಮಹುಸೇನ್ ಮಕಾನದಾರ, ಅಬುದಿಲ್ಲಾ ಪೀರಜಾದೆ, ಇಸ್ಮಾಯಿಲ್ ಮಕಾನದಾರ, ಮಕ್ತುಮಹುಸೇನಿ ದುಬ್ಬಾಳ, ಹುಸೇನಸಾಬ್ ದುಬ್ಬಾಳ, ಅಖ್ತರ್ ಮುಲ್ಲಾ, ಮಹೇರ್ ಅಲೀ ಶಹಾ ಪೀರನಗುಡಿ ಮತ್ತಿತರರು ಉಪಸ್ಥಿತರಿದ್ದರು.
ಸವದತ್ತಿಯ ಯಲ್ಲಮ್ಮಗುಡ್ಡ ಹಾಗೂ ಹಿರೇಕುಂಬಿಯ ಹಜರತ್ ಸೈಯ್ಯದ್ ಮಕ್ತುಮಹುಸೇನಿ ದಗರ್ಾ ಎರಡೂ ಪವಿತ್ರ ಧಾಮರ್ಿಕ ಸ್ಥಳಗಳು. ನಾವು ಪ್ರತಿವರ್ಷ ಎರಡೂ ಜಾತ್ರೆಗೆ ಬಂದು ದರ್ಶನ ಪಡೆಯುತ್ತೇವೆ. ಇವು ಭಾವೈಕ್ಯತೆ ತಾಣವಾಗಿವೆ. ಇಂದು ಕುಟುಂಬಸ್ಥರೆಲ್ಲ ಸೇರಿ ಬಂದು ದೇವರ ದರ್ಶನ ಪಡೆದಿದ್ದೇವೆ ಎಂದು ಬೈಲಹೊಂಗಲ ಬೆಳವಡಿ ಗ್ರಾಮದ ಮಲ್ಲಪ್ಪ ಮಾಳಗಿ ಹೇಳಿದರು.
ಈ ಉರುಸ್ಗೆ ವಿವಿಧ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಆದರೆ, ಸೌಕರ್ಯ ಮಾತ್ರ ಇನ್ನೂ ಸುಧಾರಿಸಿಲ್ಲ. ವಿಶೇಷವಾಗಿ, ಗ್ರಾಮದಿಂದ ದಗರ್ಾಕ್ಕೆ ಗುಡ್ಡವೇರುವ ಮಾರ್ಗದಲ್ಲಿ ರಸ್ತೆಬದಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ದಗರ್ಾದ ಮಾಹಿತಿ ಸಾರುವ ನಾಮಫಲಕ ಅಳವಡಿಕೆ ಮಾಡಬೇಕೆಂದು ಉರುಸ್ಗೆ ಬಂದಿದ್ದ ಭಕ್ತರು ಸಕರ್ಾರವನ್ನು ಒತ್ತಾಯಿಸಿದರು.
ಇದರಿಂದ ದಗರ್ಾಕ್ಕೆ ಆದಾಯ ಬರುವ ಜತೆಗೆ, ಭಕ್ತರಿಗೆ ಸಹ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.