ಡೈಮಂಡ್ ಪ್ರಿಮೀಯರ ಲೀಗ್‌ಗೆ ಚಾಲನೆ

Diamond Premier League launched

ಚಡಚಣ 24: ಡೈಮಂಡ್ ಬಿಲ್ಡರ್ ಮತ್ತು ಡೆವಲಪರ್ಸ್‌ ಬಿಜಾಪುರವರ ವತಿಯಿಂದ ಪ್ರಥಮ ಬಾರಿಗೆ ಡೈಮಂಡ್   ಪ್ರಿಮೀಯರ ಲೀಗ್ ಚಡಚಣದಲ್ಲಿ ಹಮ್ಮಿಕೊಂಡಿದ್ದು, ಇನ್ನು ಹೆಚ್ಚು ಹೆಚ್ಚು ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲು ಯೋಜಿಸಿದ್ದು ಅದಕ್ಕೆ ಚಡಚಣ ಭಾಗದ ಜನರ ಸಹಕಾರ ಅವಶ್ಯಕವಾಗಿದೆ ಎಂದು ಡೈಮಂಡ್ ಬ್ಯಾಂಕಿನ ಅಧ್ಯಕ್ಷ ಕಾಶಿನಾಥ್ ಕಾಮಗಳ ಹೇಳಿದರು.  

ಪಟ್ಟಣದ ಸಲಗರ ರೋಡಿನ ಡೈಮಂಡ್ ಪಾರ್ಕನಲ್ಲಿ ಕ್ರಿಕೆಟ್ ಪ್ರಿಮೀಯರ ಲೀಗ್ ಕಾರ್ಯಕ್ರಮ ಉದ್ಘಾಟಸಿ  ಮಾತನಾಡಿದರು.  

 ಮುಖ್ಯ ಅತಿಥಿಗಳಾದ  ಚಡಚಣದ ವಿರಕ್ತಮಠದ ಷಡಕ್ಷರಿ ಮಹಾಸ್ವಾಮಿಗಳು ಮಾತನಾಡಿ ಭಾರತ ದೇಶದಲ್ಲಿ  ಅತಿ ಹೆಚ್ಚು ಭಾಗವಹಿಸುವ ಕ್ರೀಡೆ ಇದ್ದರೆ ಅದು ಕ್ರಿಕೆಟ್ ಆಗಿದೆ, ಕ್ರಿಕೆಟ ಮಾನಸಿಕವಾಗಿ ಹಾಗೂ ದೈಹಿಕವಾಗಿ ಮನುಷ್ಯನನ್ನು ಸದೃಢ ಮಾಡುತ್ತದೆ ಎಂದರು. 

ಚಡಚಣದಲ್ಲಿ ಡೈಮಂಡ್ ಬ್ಯಾಂಕಿನ ಅಧ್ಯಕ್ಷ ಕಾಶಿನಾಥ್ ಕಾಮಗೋಳ ಅವರು ಇದೇ ಪ್ರಥಮ ಬಾರಿಗೆ 150000 ರೂಪಾಯಿ ಮೊತ್ತದ ಪ್ರಥಮ, 100000 ರೂ.ದ್ವಿತಿಯ, 50000 ರೂ. ತೃತಿಯ ಬಹುಮಾನ ಹಾಗೂ 25000 ರೂ, ಒಟ್ಟು 3ಲಕ್ಷ 25 ಸಾವಿರ ರೂಪಾಯಿ ಕೊಡಮಾಡಿದ್ದು ಕ್ರೀಕೆಟ್ ಆಟಗಾರರು ಸಂತೋಷವಾಗಿದೆ ಎಂದರು. 

ಚಡಚಣ ಡೈಮಂಡ್ ಬ್ಯಾಂಕಿನ ಅಧ್ಯಕ್ಷ ಮಲ್ಲನಗೌಡ ಬಿರಾದರ, ಉಪಾಧ್ಯಕ್ಷ ಅಂಬಾದಾಸ್ ಸಿಂದಗಿ, ಚೇತನ ಮಠ,ಪ.ಪಂ.ಸದಸ್ಯ ಚೇತನ ನೀರಾಳೆ, ಶಶಿಧರ್ ರೋಡಗಿ, ಲಚ್ಚಪ್ಪ ಭೂಸನೂರ, ಕಾಶಿಲಿಂಗ ಶೇಗಾವಿ, ಭರತಸಿಂಗ್ ಹಜೇರಿ, ಬೀರದೇವ ವಾಗ್ಮೊಡೆ, ರಾಜು ಅತ್ತಾರ, ಲಕ್ಷ್ಮಣ ರೂಪನೂರ್, ರವಿ ಸಿಂಧೆ, ಮುಸ್ತಾಕ ಅತ್ತಾರ, ಅಮೀರ ನಧಾಪ, ಸಂಗಮೇಶ ದೇವರಾಯ, ರೋಹಿಣಿ ದಯಾನಂದ ಕಲ್ಯಾಣಶೆಟ್ಟಿ, ಸಾಗರ ಬಗಲಿ, ಜಾಹಂಗೀರ ಅತ್ತಾರ, ಬಾಬುಲಾಲ ಅತ್ತಾರ, ಪ್ರೇಮ ಬಡಿಗೇರ, ರೋಹಿತ ಕರಜಗಿ ಮುಂತಾದವರು ಇದ್ದರು.