ರಾಯಬಾಗ 27: ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ರೈತರು ತಮ್ಮ ಜಮೀನದಲ್ಲಿರುವ ಮುಂಗಾರು ಬೆಳೆ ಕಟಾವು ಮಾಡಿ ಹಿಂಗಾರು ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೃಷಿ ಇಲಾಖೆಯಿಂದ ಹಿಂಗಾರು ಬೆಳೆ ಬಿತ್ತನೆ ಮಾಡಲು ಕಡಲೆ ಬೀಜ ಮತ್ತು ಜೋಳದ ಬೀಜಗಳನ್ನು ರಿಯಾಯತಿ ದರದಲ್ಲಿ ನೀಡಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷಿ ಇಲಾಖೆ ಸಹಾಯಕ ನಿದರ್ೇಶಕ ಎಮ್.ಸಿ.ಮನ್ನಿಕೇರಿ ಹೇಳಿದರು.
ಗುರುವಾರ ಪಟ್ಟಣದ ಕೃಷಿ ಇಲಾಖೆಯಲ್ಲಿ ರೈತರಿಗೆ ಹಿಂಗಾರು ಬೆಳೆ ಬಿತ್ತನೆಗೆ ಕಡಲೆ ಬೀಜ ಮತ್ತು ಜೋಳ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಿಸಿ ಮಾತನಾಡಿದ ಅವರು, ಹಿಂಗಾರು ಬೆಳೆ ಬೆಳೆಯಲು ಉತ್ತಮ ಮಳೆಯಾಗುತ್ತಿದೆ. ರೈತರು ರಿಯಾಯತಿ ದರದಲ್ಲಿ ಬೀಜ ಖರೀದಿಸಲು ತಮ್ಮ ಜಮೀನದ ಖಾತೆ ಉತಾರ, ಆಧಾರ ಚೀಟಿ, ಒಂದು ಪಾಸ್ಪೋಟರ್್ ಸೈಜ್ ಪೋಟೊ ಮತ್ತು ಬ್ಯಾಂಕ್ ಪಾಸ್ಬುಕ್ ನೀಡಿ ಅಜರ್ಿ ಸಲ್ಲಿಸಿ ಬೀಜಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ರಾಯಬಾಗ ಮತ್ತು ಕುಡಚಿ ಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ಪಡೆದುಕೊಳ್ಳಬೇಕೆಂದರು. ಬುಧವಾರ ತಾಲೂಕಿನ ಕುಡಚಿಯಲ್ಲಿ 123.04 ಮೀಮೀ, ರಾಯಬಾಗ 69.08 ಮೀಮೀ, ಹಾರೂಗೇರಿ 62.06 ಮೀಮೀ, ಯಲ್ಪಾರಟ್ಟಿ 75 ಮೀಮೀ, ಸವಸುದ್ದಿ 35.02ಮೀಮೀ, ಮುಗಳಖೋಡ 28 ಮೀಮೀ, ಮತ್ತು ಬಾವಚಿ 25.04ಮೀಮೀ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಇಲಾಖೆ ಅಧಿಕಾರಿಗಳಾದ ಬಿ.ಎ.ಕಿಲ್ಲೇದಾರ, ಎಮ್.ಎಸ್.ಸನದಿ, ಗುರುಸಿದ್ದ ಮುದ್ದಪ್ಪ ಡಿ.ಎಸ್.ಯಲಮೇಲಿ, ಡಿ.ಎ.ರಜಪೂತ, ಬಿ.ಎನ್.ಕೋಳಿ ಸೇರಿದಂತೆ ಅನೇಕರು ಇದ್ದರು