ಕೃಷಿ ಉತ್ಪನ್ನ ಮಾರುಕಟ್ಟೆಯ ರೈತ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ

District Collector visits Raitha Bhavan, agricultural produce market

ಕೃಷಿ ಉತ್ಪನ್ನ ಮಾರುಕಟ್ಟೆಯ ರೈತ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ

ಹಾವೇರಿ 19: ರಾಣೇಬೆನ್ನೂರ್ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾದ ಕೃಷಿ ಉತ್ಪನ್ನ ಮಾರುಕಟ್ಟೆಯ ರೈತ ಭವನವನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಭೇಟಿ ನೀಡಿ  ಪರೀಶೀಲಿಸಿದರು. ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಹೊಂದಿಕೊಂಡು ಹೂಲಿಹಳ್ಳಿ-ಕೂನಬೇವು ಉಪ ಮಾರುಕಟ್ಟೆ (ಮೆಗಾ ಮಾರುಕಟ್ಟೆ) ಪ್ರಾಂಗಣವು 220 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಯಾಗಿದೆ, ಮಾರುಕಟ್ಟೆ ಪ್ರಾಂಗಣವು 518 ಸಂಖ್ಯೆ ನಿವೇಶನಗಳನ್ನು ಹೊಂದಿದ್ದು  ಅಗತ್ಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.  ಮೆಗಾ ಮಾರುಕಟ್ಟೆಯು ಸುಸಜ್ಜಿತವಾದ ಆಡಳಿತ ಕಚೇರಿ, ವ್ಯವಸ್ಥಿತವಾದ ಟೆಂಡರ್ ಹಾಲ್ರೈತ ಭವನ, ಅತಿಥಿ ಗೃಹ, ಸುಸಜ್ಜಿತವಾದ ಟ್ರಕ್ ಟರ್ಮಿನಲ್,  ಕ್ಯಾಂಟೀನ್, ಶೌಚಾಲಯಗಳು, ಓವರ್ ಹೆಡ್ ಟ್ಯಾಂಕ್ ಗಳು, ಹರಾಜುಕಟ್ಟೆ, ಆಹಾರ ಮಳಿಗೆ, ಒಳಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಘನ ತ್ಯಾಜ್ಯ ವಿಲೇವಾರಿ, ಗೋದಾಮುಗಳನ್ನು ಒಳಗೊಂಡಿದೆ. ಹಾಗೆಯೇ  ಸಂಸ್ಕರಣ ಘಟಕಗಳ ನಿರ್ಮಾಣಕ್ಕೆ ತಲಾ 1 ಎಕರೆ ಜಾಗದಂತೆ ಒಟ್ಟು 12 ಎಕರೆ ಮೀಸಲಿರಿಸಲಾಗಿದೆ ಹಾಗೂ 1 1/2 ಎಕರೆ ವಿಸ್ತೀರ್ಣದ ನಿವೇಶನ, ಶೀಥಲ ಘಟಕಗಳ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ ಎಂದರು. ಮೆಗಾ ಮಾರುಕಟ್ಟೆಯು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತವಾದ ವ್ಯವಸ್ಥೆಗಳನ್ನು ಹೊಂದಿದ್ದು ವರ್ತಕರುಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು  ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಲಾಗಿದೆ  ಎಂದರು. ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಶೈಲಜಾ ಹಾಗೂ ಇತರರು ಇದ್ದರು.