ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

District level selection in talent fountain

ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ  

ಇಂಡಿ07 :ಇಂಡಿಯ ಕರ್ನಾಟಕ ಟೀಚರ್ಸ್‌ ಬಿ ಎಡ್ ಕಾಲೇಜಿನಲ್ಲಿ ನಡೆದ ಇಂಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಟ್ಟಣದ  ಶ್ರೀ ಹಡಪದ ಅಪ್ಪಣ್ಣ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಪೃಥ್ವಿ ತಾಂಬೆ ಮಿಮಿಕ್ರಿಯಲ್ಲಿ, ಹಾಗೂ ಕುಮಾರಿ ಶ್ರೀಲಕ್ಷ್ಮಿ ದಾಮಾ ಜಾನಪದ ಗೀತೆಯಲ್ಲಿ ತಾಲೂಕು ಮಟ್ಟದಲ್ಲಿ ಭಾಗವಹಿಸಿ  ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ವಿದ್ಯಾರ್ಥಿಗಳಿಗೆ  ಸಾಧನೆಗೆ  ಹಡಪದ ಅಪ್ಪಣ್ಣ ವಿದ್ಯಾ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕರು, ಕಾರ್ಯದರ್ಶಿಗಳು ಆಡಳಿತ ಅಧಿಕಾರಿಗಳು ಮುಖ್ಯ ಗುರು ಮಾತೆಯರು ಮುಖ್ಯೋಪಾಧ್ಯಾಯರು ಮಾರ್ಗದರ್ಶಕರು ಹಾಗೂ ಸರ್ವ ಶಿಕ್ಷಕ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.