ದೇವರಹಿಪ್ಪರಗಿ 02: ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಕವಯಿತ್ರಿ ಆದ "ಸುಕನ್ಯ ಮಾರುತಿ,ಬದುಕು ಮತ್ತು ಸಾಹಿತ್ಯ"ಎಂಬ ವಿಷಯದ ಮೇಲೆ ಸಂಶೋಧನೆ ಕೈಗೊಂಡು, ಗುಲ್ಬರ್ಗ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಮಂಡಿಸಿದ ಮಹಾಪ್ರಬಂಧಕ್ಕೆ ಅರುಣಕುಮಾರ ಶಿವಕುಮಾರ ಬಟವಾಲ(ಕುಮಸಗಿ) ಇವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ ,ಹಾವೇರಿ ಇದರ ವಿಶ್ರಾಂತ ಕುಲಪತಿಗಳಾದ ಡಾ. ಡಿ .ಬಿ.ನಾಯಕ್ ಅವರು ಮಾರ್ಗದರ್ಶಕರಾಗಿದ್ದರು.