ಲೋಕದರ್ಶನ ವರದಿ
ಮಹಾಪುರುಷರನ್ನು ಒಂದೇ ಸಮುದಾಯಕ್ಕೆ ಸಿಮೀತಗೊಳಿಸಬೇಡಿ: ರಾಜು ಕಾಗೆ
ಕಾಗವಾಡ 14: ವಿಶಾಲವಾದ ಭಾರತ ದೇಶದಲ್ಲಿಯ ಮಹಾನ ಪುರುಷರನ್ನು ಅವರವರ ಸಮುದಾಯಗಳಿಗೆ ಸಿಮೀತಗೊಳಿಸಿ ನಾವು ಅವರನ್ನು ಅಗೌರವಿಸುತ್ತಿದ್ದೇವೆ. ಮಹಾವೀರ, ಬುದ್ಧ ಬಸವ, ಅಂಬೇಡ್ಕರರಂತ ಮಹಾನಾಯಕರು ದೇಶದ ಪ್ರತಿಯೊಬ್ಬರಿಗಾಗಿ ಶ್ರಮಿಸಿದ್ದು, ಪ್ರತಿಯೊಬ್ಬರು ಅವರನ್ನು ಸ್ಮರಿಸುವಂತಾಗಬೇಕೆಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ.
ಅವರು ಸೋಮವಾರ ದಿ. 14 ರಂದು ಪಟ್ಟಣದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಥಣಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರ 135 ನೇ ಜಯಂತಿ ನಿಮಿತ್ಯ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. ಮಹಾನ ಪುರುಷರು ತಾವು ಹುಟ್ಟಿರುವ ಜಾತಿಗೆ ಸೀಮತವಾಗದೇ ಸಮಾಜದ ಪ್ರಗತಿಗೆ ಶ್ರಮಿದ್ದಾರೆ. ಆದರೇ ನಾವು ಇಂದು ಅವರನ್ನು ನಮ್ಮ ಸ್ವಾರ್ಥಕ್ಕಾಗಿ ತಮ್ಮತಮ್ಮ ಸಮಾಜಕ್ಕೆ ಸೀಮಿತಗೊಳಿಸಿ, ಅವರ ಮಹಾತ್ಮೆ ಇನ್ನಷ್ಟು ಕುಸಿಯುತ್ತಿದೆ. ಇದು ನನಗೆ ವೈಯಕ್ತಿವಾಗಿ ಬೇಸರ ಮೂಡಿಸಿದೆ.
ಉಪನ್ಯಾಸಕರಾಗಿ ಆಗಮಿಸಿದ್ದ ಜಮಖಂಡಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಅರುಣ ಕಾಂಬಳೆ ಮಾತನಾಡಿ, ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಶೋಷಿತರು ತಮ್ಮನ್ನು ತಾವು ಗುರಿತಿಸಿಕೊಳ್ಳುವಲ್ಲಿ ಡಾ. ಅಂಬೇಡ್ಕರರ ಕೊಡುಗೆ ಅಪಾರವಾಗಿದೆ. ಸಂವಿಧಾನ ರಚನೆ ಮಾಡಿ, ಸರ್ವರಿಗೂ ಸಮಾನ ಹಕ್ಕು ನೀಡಿದ ಅವರು, ಶೋಷಿತರು, ಬಡವರು, ದೀನ-ದಲಿತರ ಮುಂದೆ ಬರಬೇಕಾದರೇ ಶಿಕ್ಷಣ ಬಹಳ ಪ್ರಮುಖವಾಗಿದೆ ಎಂದು ಪ್ರತಿಪಾದಿಸಿ, ಆರ್ಟಿಕಲ್ 45ರಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರಿಗೆ ಉಚಿತ ಶಿಕ್ಷಣದ ಹಕ್ಕು ನೀಡಿದ್ದಾರೆ ಎಂದರು.
ತಹಶೀಲ್ದಾರ ರಾಜೇಶ ಬುರ್ಲಿ, ಸ್ವಾಗತಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರರ ಧ್ಯೇಯ, ಧೋರಣೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮಕ್ಕೂ ಮೊದಲು ಡಾ. ಬಾಬಾಸಾಹೇಬ ಅಂಬೇಡ್ಕರರ ಪುತ್ಥಳಿಗೆ ಮಾಲಾರೆ್ಣ ಮಾಡಿ, ಭಗವಾನ ಬುದ್ಧ, ಮಹಾತ್ಮಾ ಜ್ಯೋತಿಬಾ ಫೂಲೆ ಮತ್ತು ಡಾ. ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಳೆದ ಎರಡು ದಿನಗಳಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಉತ್ಸವ ಕಮಿಟಿಯವರು ಹಮ್ಮಿಕೊಂಡಿದ್ದ ಲಿಂಬು ಚಮಚೆ, ಸ್ಲೋ ಸೈಕ್‌ಲಿಂಗ್, ಡ್ಯಾನ್ಸ್, ಸಂಗೀತ ಕುರ್ಚಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪುಟ್ಟ ಬಾಲಕಿ ಪೂರ್ವಿ ಮೊಗಲ ಇವಳು ಶಾಸಕ ರಾಜು ಕಾಗೆ ಅತಿಥಿಗಳ ಮುಂದೆ ನೃತ್ಯ ಪ್ರದರ್ಶಿಸಿದ್ದು, ಶಾಸಕರು ಪುಟ್ಟ ಬಾಲಕಿಗೆ ಆಶೀರ್ವದಶಿ ಬಹುಮಾನ ನೀಡಿದರು. ಜೊತೆಗೆ ಪಿಎಸ್‌ಐ ಗಂಗಾ ಬಿರಾದರ ಇವರು ಬಾಲಿಕೆಯನ್ನು ಮುದ್ದಾಡಿ, ಬಹುಮಾನ ನೀಡಿದ್ದು, ವಿಶೇಷವಾಗಿತ್ತು.
ತಾ.ಪಂ. ಇಓ ವೀರಣ್ಣಾ ವಾಲಿ, ಸಿಡಿಪಿಓ ಸಂಜೀವಕುಮಾರ ಸದಲಗಿ, ಬಿಈಓ ಎಂ.ಆರ್. ಮುಂಜೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪುಷ್ಪಲತಾ ಸುನ್ನದಕಲ್ಲ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ಎಸ್. ಬೆಳಕೇರಿ, ಸಬ್ ರಜಿಸ್ಟ್ರರ ರಾಜಶೇಖರ ಮುಕ್ಕನ್ನವರ, ಜ್ಯೋತಿ ಪಾಟೀಲ, ಉಪತಹಶೀಲ್ದಾರ ರಷ್ಮಿ ಜಕಾತೆ, ಅಣ್ಣಾಸಾಬ ಕೋರೆ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಎಂ.ಆರ್. ಪಾಟೀಲ, ಭರತ ಟೊನಗೆ, ಎ.ಡಿ. ಅನ್ಸಾರಿ, ಶಿರಗುಪ್ಪಿ ಶುಗರ್ಸನ ಆಡಳಿತಾಧಿಕಾರಿ ಅರುಣ ಫರಾಂಡೆ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕ ಸೌರಭ ಪಾಟೀಲ, ಮುಖಂಡರಾದ ಕಾಕಾ ಪಾಟೀಲ, ಜ್ಯೋತಿಕುಮಾರ ಪಾಟೀಲ, ಪ್ರಕಾಶ ಪಾಟೀಲ, ರಮೇಶ ಚೌಗುಲೆ, ಮಹಾಂತೇಶ ಬಡಿಗೇರ, ಪ್ರಕಾಶ ಧೊಂಡಾರೆ, ಉದಯ ಖೋಡೆ, ಮೀರಾಸಾಬ ಕಾಂಬಳೆ, ಅವಿನಾಶ ದೇವನೆ, ಬಾಳಾಸಾಹೇಬ ಕಾಂಬಳೆ, ಅನೀಲ ಚವ್ಹಾನ, ನ್ಯಾಯವಾದಿ ಶಿವಾಜಿ ಕಾಂಬಳೆ, ಉದಯ ಕಾಂಬಳೆ, ರಾಹುಲ ಘೋರಡೆ ಸೇರಿದಂತೆ ತಾಲೂಕಿನ ಮುಖಂಡರು, ಪಟ್ಟಣದ ನಾಗರೀಕರು ಉಪಸ್ಥಿತರಿದ್ದರು.