ಯಡಿಯೂರಪ್ಪ-ಬೊಮ್ಮಾಯಿ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ

ರಾಣೆಬೆನ್ನೂರು: ಯಡಿಯೂರಪ್ಪನವರ ಮತ್ತು ಬೊಮ್ಮಾಯಿಯವರ ಬಗ್ಗೆ ಯಾರೂ ಸಹ ಹಗುರವಾಗಿ ಮಾತನಾಡಬಾರದು. ಕಾಂಗ್ರೆಸ್ ಅಭ್ಯಥರ್ಿಗೆ ಸೋಲಿನ ಭಯ ಉಂಟಾಗಿ ಹತಾಶಗೊಂಡು ಕಾಂಗ್ರೇಸ್ ಮುಖಂಡರು ಮಾತನಾಡಿದ್ದಾರೆ. ಕೋಳಿವಾಡ ಅವರು ಎಂತಹವರು? ಹೇಗಿದ್ದಾರೆ? ಎಂಬುದರ ಬಗ್ಗೆ ತಾಲೂಕಿನ ಜನರೇ ಡಿ.5ರ ನಂತರ ಉತ್ತರಿಸಲಿದ್ದಾರೆ. ಇಂತಹ ಬಿಜೆಪಿ ನಾಯಕರ ವಿರುದ್ದ ಆಧಾರ ರಹಿತ ಆರೋಪಗಳನ್ನು ಮಾಡಿದರೆ ಬಿಜೆಪಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಎಂದು ಸ್ಥಳೀಯ ಬಿಜೆಪಿ ಅಭ್ಯಥರ್ಿ ಅರುಣಕುಮಾರ ಪೂಜಾರ ಹೇಳಿದರು. 

ಬುಧವಾರ ಬಿಜೆಪಿ ಕಾಯರ್ಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಮೇಲೆ ಕೆಲವರು ಉದ್ದೇಶಪೂರ್ವಕವಾಗಿ ಕ್ರಿಮಿನಲ್ ಪ್ರಕರಣಗಳು ಇವೆ ಎಂದು ಹೇಳುತ್ತಾರೆ. ಆದರೆ 50 ವರ್ಷಗಳ ಯಾವುದಾದರೂ ಹೋರಾಟ ಮಾಡಿದ್ದರೆ ನಿಮ್ಮ ಮೇಲೂ ಪ್ರಕರಣಗಳು ದಾಖಲಾಗುತ್ತಿದ್ದವು. ಈ ತಾಲೂಕಿನ ಮರಳನ್ನು ಲೂಟಿ ಮಾಡಿದ ಕೀತರ್ಿ ನಿಮಗೆ ಸಲ್ಲುತ್ತದೆ ಎಂದು ನಾಗರೀಕರೆ ಹೇಳುತ್ತಿದ್ದಾರೆ. ಕೇಸ್ಗಳು ರಾಜಕಾರಣದಲ್ಲಿ ಇವೆಲ್ಲ ಸವರ್ೆಸಾಮಾನ್ಯ. ಪರಿಸ್ಥಿತಿ ಹೀಗಿರುವಾಗ ಬೊಮ್ಮಾಯಿಯವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಆದಾಯ ತೆರಿಗೆ ಅಧಿಕಾರಿಗಳ ದಾಳಿ ಬೊಮ್ಮಾಯಿಯವರಿಗೂ ಯಾವುದೇ ಸಂಬಂಧವಿಲ್ಲ. ಚುನಾವಣಾಧಿಕಾರಿಗಳು ಸ್ವತಃ ಗೃಹ ಸಚಿವರ ಕಾರನ್ನು ತಪಾಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬೇಕು ಎಂದು ಹೇಳಿದರು.

ತಾಲೂಕ ಬಿಜೆಪಿ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾತನಾಡಿ, ಬೊಮ್ಮಾಯಿಯವರ ಬಗ್ಗೆ ಆರೋಪ ಮಾಡಿರುವ ಕಾಂಗ್ರೆಸ್ ಮುಖಂಡರು ಮೊದಲು ನಿಮ್ಮ ಹಿನ್ನಲೆ ಏನು ಎಂಬುದನ್ನು ಇಡೀ ತಾಲೂಕಿಗೆ ಗೊತ್ತಿದೆ. ಅದನ್ನು ನೀವುಗಳು ಅರಿತುಕೊಳ್ಳಬೇಕು. 

 ನಗರಸಭಾ ಸದಸ್ಯ ಪ್ರಕಾಶ್ ಬುರುಡಿಕಟ್ಟಿ ಮಾತನಾಡಿ, ಕೋಳಿವಾಡರ ಮನೆಯಲ್ಲಿ 10 ಕೋಟಿ ರೂ ಇತ್ತೆಂದು ಚುನಾವಣಾಧಿಕಾರಿಗಳಿಗೆ ಸಂಜೆ ವೇಳೆಗೆ ನಾನೇ ಸಹ ದೂರು ನೀಡಿದ್ದೆ. ಆದರೆ ಅವರ ಮನೆ ಮೇಲೆ ರಾತ್ರಿ 10ಗಂಟೆಯ ನಂತರ ದಾಳಿ ಮಾಡಲಾಯಿತು. ಈ ಮಧ್ಯೆ ಚುನಾವಣಾಧಿಕಾರಿಗಳು ಕೋಳಿವಾಡರಿಗೆ ಮುಂಗಡವಾಗಿ ಮಾಹಿತಿ ನೀಡಿ ಸಂಗ್ರಹಿಸಿದ ದುಡ್ಡನ್ನು ಬೇರೆಡೆಗೆ ಸಾಗಿಸಲು ಅಧಿಕಾರಿಗಳು ಸಹಕರಿಸಿ, ತಮ್ಮ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.   ಗುಪ್ತ ಮಾಹಿತಿ ಇಡುತ್ತೇವೆಂದು ಹೇಳುವ ಚುನಾವಣಾಧಿಕಾರಿಗಳು ಕೋಳಿವಾಡರ ಪ್ರಕರಣ ಬಗ್ಗೆ ಕೋಳಿವಾಡರಿಗೆ ಮೊದಲೇ ಮಾಹಿತಿ ನೀಡಿದ್ದರಿಂದ ಇಷ್ಟೆಲ್ಲ ರಾದ್ಧಾಂತವಾಯಿತು. ಚುನಾವಣಾಧಿಕಾರಿಗಳ  ಮೇಲೆ ರಾಜ್ಯ ಮತ್ತು ಕೇಂದ್ರದ ಚುನಾವಣಾ ಆಯೋಗಕ್ಕೆ ನಾನು ದೂರು ನೀಡುವುದಾಗಿ ಪ್ರಕಾಶ್ ಸ್ಪಷ್ಟಪಡಿಸಿದರು. ಕೊಲೆಗೆಡುಕರು ಯಾರು? ತಲೆಹಿಡುಕರು ಯಾರು ? ಎಂಬುದನ್ನು ನಾನು ಹೇಳುವ ಮೊದಲೆ ಆರೋಪ ಮಾಡಿದವರು ಸ್ಪಷ್ಟಪಡಿಸಲಿ. ಎಲ್ಲದಕ್ಕೂ ನಾನು ಉದಾಹರಣೆ ಮೂಲಕ ಪ್ರತ್ಯುತ್ತರ ನೀಡುತ್ತೇನೆ ಎಂದು ಬುರಡಿಕಟ್ಟಿ ಹೇಳಿದರು. ಸಂಕಪ್ಪ ಮಾರನಾಳ, ಶೇಖಪ್ಪ ನರಸಗೊಂಡರ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.