ನಗರದ 3 ನೇ ನಂಬರ ಶಾಲೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ದಾನಿಗಳಿಗೆ ಸನ್ಮಾನ

Donors felicitated on the occasion of Republic Day at No. 3 school in the city


ನಗರದ 3 ನೇ ನಂಬರ ಶಾಲೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ದಾನಿಗಳಿಗೆ ಸನ್ಮಾನ 

ಗದಗ 4 : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನಲ್ಲಿರುವ ಒಕ್ಕಲಗೇರಿ ಬಡಾವಣೆಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ 3 ನೇ ನೇ ನಂಬರ ಶಾಲೆಯಲ್ಲಿ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.  

ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ   ಲಕ್ಷ್ಮೀ ಎಸ್ ಮುಳಗುಂದ ರವರು ನೆರವೇರಿಸಿದರು. ಬಡಾವಣೆಯ ಹಿರಿಯರಾದ ಫಕ್ಕಿರಾ​‍್ಪ ಹೇಬಸೂರ ರವರು ಸಂವಿಧಾನ ಕುರಿತು ಮಾತನಾಡಿದರು. ವಾರ್ಡಿನ ನಗರಸಭೆಯ ಸದಸ್ಯರಾದ ಜನಾಬ್ ಬರಕತ ಅಲಿ ಮುಲ್ಲಾ ರವರು ಸಂವಿದಾನವನ್ನು ಗೌರವದಿಂದ ಕಾಣಬೇಕು ಎಂದರು. ಅದರಂತೆ ಗಣ್ಯರಾದ ಕೆ ಆಯ್ ಸಂಪಗಾವಿಯವರು ಮಕ್ಕಳಿಗೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಗಣ್ಯ ವ್ಯಕ್ತಿಗಳಾಗಿ ಎಂದು ಹಾರೈಸಿ ಮಕ್ಕಳಿಗೆ ಸಿಹಿ ವಿತರಣೆ ಮಾಡಿದರು. ಶಾಲೆಯ ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ, ಗಣರಾಜ್ಯೋತ್ಸವ ಕುರಿತು ಭಾಷಣ ಮಾಡಿದರು.  

ಇದೇ ವೇದಿಕೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಎಸ್ ಎಸ್ ಕೆ ಅನಂತಧ್ಯಾನ ಪರಿವಾರದವರು 60 ಟೀ-ಶರ್ಟ್‌, 30 ಖುರ್ಚಿಗಳನ್ನು ಮತ್ತು ಜೆ ವ್ಹಿ ಹಿರೇಮಠ ರವರು 60 ಬರೆಯುವ ಕ್ಲಿಪ್ ಪ್ಯಾಡ್ ಗಳನ್ನು ದೇಣಿಗೆಯ ರೂಪದಲ್ಲಿ ನೀಡಿದರು, ಅದರಂತೆ ಶ್ರೀ ಅಮೀರ್ ಬಾವಿಕಟ್ಟಿ ನಲಿ -ಕಲಿ ವಿದ್ಯಾರ್ಥಿಗಳಿಗೆ ನಾಲ್ಕು ಟೇಬಲ್ ಗಳನ್ನು ದೇಣಿಗೆಯಾಗಿ ನೀಡಿರುವ ಪ್ರಯುಕ್ತ ಅವರಿಗೆ 76 ನೇ ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಶುಭ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂಧರ್ಭದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಶ್ರೀ ಮಲ್ಲೇಶಪ್ಪ ಹೊಂಬಳ, ಶ್ರೀ ಫಕ್ಕಿರಾ​‍್ಪ ಹೇಬಸೂರ,   ಕೆ ಆಯ್ ಸಂಪಗಾವಿ,   ರಾಮಣ್ಣ ಗುಜಮಾಗಡಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ   ರಾಘವೇಂದ್ರ ಪಾಲನಕರ,   ಪ್ರಶಾಂತ ಶಾಬಾದಿಮಠ,  ಶಾಫಿನ್ ಮುಲ್ಲಾ,   ರುಕ್ಸಾನಾ ನದಾಫ್   ಜಯಮ್ಮ ಮೆಣಸಗಿ,   ವಿಜಯಲಕ್ಷ್ಮಿ ಹಳ್ಳಿಕೇರಿ,   ಲತಾ ಜಕ್ಕನಗೌಡ್ರ, ಹಾಗೂ ಎಸ್ ಡಿ ಎಮ್ ಸಿ ಸರ್ವ ಸದಸ್ಯರು ಉಪಸ್ಥಿತರಿದ್ದರು. 

ಕಾರ್ಯಕ್ರಮದ ಸ್ವಾಗತವನ್ನು ಗುರುಮಾತೆಯರಾದ   ಪಿ ಎಸ್ ಮಣ್ಣೂರ ರವರು ಮಾಡಿದರು. ಶ್ರೀಮತಿ ಎಸ್ ಎಸ್ ಹಿರೇಮಠ ಕಾರ್ಯಕ್ರಮ ನಿರೂಪಣೆಗೈದರು.   ಜಿ ಕೆ ಕಾಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು.   ಎಸ್ ಬಿ ಬಾಗೂರ ರವರು ವಂದನಾರೆ​‍್ಣ ಮಾಡಿದರು.