ಸಾಮಾಜಿಕ ಸಮಾನತೆ ಕಲ್ಪಿಸುವಲ್ಲಿ ಡಾ. ಅಂಬೇಡ್ಕರ್ ಅವರ ಕೊಡುಗೆ ಅಪಾರ

Dr. Ambedkar's contribution in creating social equality is immense

ಕಂಪ್ಲಿ 16: ಪಟ್ಟಣದ ಗೃಹರಕ್ಷಕದಳದ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಇಲ್ಲಿನ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಘಟಕಾಧಿಕಾರಿ ಹೆಚ್‌.ಗಿರಿಧರ ಮಾತನಾಡಿ, ದೇಶದಲ್ಲಿನ ಎಲ್ಲ ಜಾತಿ ಮತ್ತು ವರ್ಗಗಳಿಗೆ ಸಾಮಾಜಿಕ ಸಮಾನತೆ ಕಲ್ಪಿಸುವಲ್ಲಿ ಡಾ. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ’. ಹಲವು ಸಮಸ್ಯೆಗಳನ್ನು ಎದುರಿಸಿ ಸಾಕಷ್ಟು ನೋವು ಅನುಭವಿಸಿ, ಎಲ್ಲರನ್ನೂ ಒಳಗೊಳ್ಳುವಂತಹ ಸಂವಿಧಾನ ರಚಿಸಿದ್ದರು. ಅವರ ಜೀವನ ಚರಿತ್ರೆ ಪ್ರತಿಯೊಬ್ಬರಿಗೂ ಪ್ರೇರಣೆ ಆಗಿದೆ. ದೇಶಕ್ಕೆಸಂವಿಧಾನ ಎಂಬ ಪವಿತ್ರ ಗ್ರಂಥ ನೀಡಿ, ಪ್ರಜಾಪ್ರಭುತ್ವಕ್ಕೆ ನೈಜ ಅರ್ಥ ಕೊಟ್ಟರು’ ಎಂದರು.ಈ ಸಂದರ್ಭದಲ್ಲಿ ಸಿಕ್ಯೂಎಂಸ್ ಕೆ.ಹೊನ್ನೂರವಲಿ, ಸೆಕ್ಷನ್ ಲೀಡರ್ ಕೆ.ಜಗದೀಶ, ಕೆ.ಸುರೇಶ ಸೇರಿದಂತೆ ಸಿಬ್ಬಂದಿಗಳು ಇದ್ದರು.