ಬಳ್ಳಾರಿಯಲ್ಲಿ ಡಾಽಽ ಬಿ ಆರ್ ಅಂಬೇಡ್ಕರ್ ರವರ 134 ನೇ ಜಯಂತಿ ಕಾರ್ಯಕ್ರಮ
ಬಳ್ಳಾರಿ 14: ನಗರದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ಜಿಲ್ಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಸಂಘದ ವತಿಯಿಂದ ಮೊದಲನೇ ಗೇಟಿನಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಪುತಳಿಗೆ ಮಾಲಾರೆ್ಣ ಹಾಗೂ ಗೌರವ ನಮನ ಮಾಡಿ ಹೂವು ಗುಚ್ಚ ಸಲ್ಲಿಸಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಽಽಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ನಂತರ ಅಂಬೇಡ್ಕರ್ ಅವರಿಗೆ ಜೈಕಾರ ಹಾಕಿ ಜಯಂತಿಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಚರ್ಮ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್, ದಲಿತ ಮುಖಂಡ ದುರುಗಪ್ಪ ತಳವಾರ, ರಾಜ್ಯ ಸಂಘಟನಾ ಸಂಚಾಲಕರಾದ ಹುಸೇನಪ್ಪ, ರಾಜ್ಯ ಸಮಿತಿ ಸದಸ್ಯರಾದ ಪಿ.ತಾಯಪ್ಪ, ವಿಭಾಗೀಯ ಸಂಘಟನಾ ಸಂಚಾಲಕರಾದ ಎ.ಕೆ.ಗಂಗಾಧರ, ಜಿಲ್ಲಾ ಪ್ರಧಾನ ಸಂಚಾಲಕರಾದ ಚಿಕ್ಕಗಾದಿ ಲಿಂಗಪ್ಪ, ರಾಚೋಟಪ್ಪ, ಈರ್ಪ, ಲಾಲೆಪ್ಪ, ಗಂಗಪ್ಪ, ರಾಮಚಂದ್ರ, ತಿಪ್ಪೇಸ್ವಾಮಿ ಸಿರಿಗೇರಿ,ಗುಂಡಪ್ಪ, ಶೇಕಣ್ಣ, ಯಂಕಪ್ಪ,ತಾಯಪ್ಪ ಸಿರಿಗೇರಿ,ಓಂಕಾರಿ ಹಲಕುಂದಿ, ದಲಿತ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.