ಡಾ. ಬಿ.ಆರ್‌.ಅಂಬೇಡ್ಕರ 134 ನೇ ಜನ್ಮದಿನಾಚರಣೆ

Dr. B.R. Ambedkar's 134th Birth Anniversary Celebration

ಡಾ. ಬಿ.ಆರ್‌.ಅಂಬೇಡ್ಕರ  134 ನೇ ಜನ್ಮದಿನಾಚರಣೆ

ಬ್ಯಾಡಗಿ 14: ಡಾ. ಬಿ.ಆರ್‌.ಅಂಬೇಡ್ಕರ ಅವರು ಎಲ್ಲಾ ದುರ್ಬಲ ಹಾಗೂ ತುಳಿತಕ್ಕೊಳಗಾದ ವರ್ಗಗಳಿಗೆ ಧ್ವನಿಯಾಗಿ ನ್ಯಾಯ ಕೊಡಿಸುವಲ್ಲಿ ಸಫಲರಾಗಿದ್ದಾರೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಸೋಮವಾರ ಅವರು ಪಟ್ಟಣದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ  134 ನೇ ಜನ್ಮದಿನಾಚರಣೆ ಹಾಗೂ ಡಾ.ಬಾಬು ಜಗಜೀವನರಾಂ ಅವರ 118 ನೇ ಜನ್ಮದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ಆರ್‌.ಅಂಬೇಡ್ಕರರು ನೀಡಿದ ಸಂವಿಧಾನದ ಮಿಸಲಾಯಿತಿಯಿಂದ ಅನೇಕರು ಸಂಸದರು ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಶೈಕ್ಷಣಿಕವಾಗಿ ಆರ್ಥಿಕವಾಗಿ ಬೆಳೆಯುವುದಕ್ಕಿಂತಾ ಸಾಮಾಜಿಕವಾಗಿ ಬೆಳೆಯಬೇಕು. ಸ್ವಾಭಿಮಾನದ ಬದುಕನ್ನು ಪ್ರತಿಯೊಬ್ಬರೂ ಕಟ್ಟಿಕೊಳ್ಳಬೇಕು. ಮೀಸಲಾತಿ ಸೌಲಭ್ಯ ಪಡೆದವರು ಸಮಾಜ ಸುಧಾರಣೆಯತ್ತ ಹೊರಳಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಫಿರೋಜ್ ಷಾ ಸೋಮನಕಟ್ಟಿ ಮಾತನಾಡಿ  ಅಂಬೇಡ್ಕರ್ ಬರೆದ ಸಂವಿಧಾನದಿಂದ ಹಿಂದುಳಿದ ಅನೇಕರು ಇಂದು ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದ ಅವರು ಡಾ. ಬಿ.ಆರ್‌.ಅಂಬೇಡ್ಕರರ ಬಗ್ಗೆ ಅವರೇ ಬರೆದ ಕವನವನ್ನು ವಾಚಿಸಿದರು.ಉಪನ್ಯಾಸಕ ಎಂ.ಆಂಜನೇಯ ಮಾತನಾಡಿ  ಅಂಬೇಡ್ಕರ್ ಅವರ ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ, ಆರ್ಥಿಕ, ರಾಜಕೀಯ ಚಿಂತನೆಗಳು ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಜೊತೆಗೆ ಎಲ್ಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬಲ್ಲದಾಗಿವೆ. ಅಂಬೇಡ್ಕರ್ ಕೇವಲ ದಲಿತರ ಅಭಿವೃದ್ಧಿಗೆ ಶ್ರಮಿಸಿದ, ಅದಕ್ಕಾಗಿಯೇ ಚಿಂತನೆ ಮಾಡುವ ಮೂಲಕ ಒಂದೇ ಜಾತಿಯ ಕಲ್ಯಾಣದ ಬಗ್ಗೆ ಆಲೋಚಿಸಿದವರೇ ಅಲ್ಲ. ಇಡೀ ಜಗತ್ತಿನ ಕಲ್ಯಾಣಕ್ಕೆ ಚಿಂತಿಸಿದ ಮಹಾನ್ ಚೇತನ ಅಂಬೇಡ್ಕರ್‌. ಅಸ್ಪೃಶ್ಯತೆಯ ನೋವುಂಡಿದ್ದ ಅವರು ಅಸ್ಪೃಶ್ಯತೆ ಹಾಗೂ ಅದಕ್ಕೆ ಕಾರಣರಾಗಿದ್ದವರನ್ನು ತೀವ್ರವಾಗಿ ಖಂಡಿಸುವ ಜೊತೆಗೆ ಆತ್ಮಶಕ್ತಿ ಜಾಗೃತಿಗೊಳಿಸಿದ್ದರು. ಎಂದರು.ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷ ಸುಭಾಸ ಮಾಳಗಿ, ತಾ.ಪಂ.ಕಾರ್ಯನಿರ್ವಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಧುರೀಣರಾದ ರಮೇಶ ಸುತ್ತಕೋಟಿ, ಫಕ್ಕಿರಮ್ಮ ಛಲವಾದಿ, ಸುರೇಶ್ ಆಸಾದಿ, ಎಸ್‌.ಎನ್‌.ಯಮನಕ್ಕನವರ, ಸೋಮಣ್ಣ ಮಾಳಗಿ, ನಾಗರಾಜ ಹಾವನೂರ, ವಿಜಯ ಮಾಳಗಿ, ದುರ್ಗೇಶ ಗೋಣೆಮ್ಮನವರ, ರಾಮಣ್ಣ ಕೋಟಿ, ಶಿವಣ್ಣ ಅಂಬಲಿ, ಹನುಮಂತಪ್ಪ ಲಮಾಣಿ, ಮಲ್ಲೇಶಣ್ಣ ಚಿಕ್ಕಣ್ಣನವರ, ಚಂದ್ರು ಗದಗಕರ, ಮಾರುತಿ ಹಂಜಗಿ, ನಿವೃತ ಉಪನ್ಯಾಸಕ ದೊಡ್ಡಮನಿ, ಸಮಾಜ ಕಲ್ಯಾಣಾಧಿಕಾರಿ ಜಿ. ದೊಡ್ಡಬಸವರಾಜ ಸೇರಿದಂತೆ ಇತರರಿದ್ದರು.