ಡಾ.ಬಿ.ಆರ್.ಅಂಬೇಡ್ಕರ ರವರ 134ನೇ ಜಯಂತಿ ಉತ್ಸವ ಕಾರ್ಯಕ್ರಮ
ರಾಯಬಾಗ, 27: ಅಂಬೇಡ್ಕರರವರು ದೇಶದ ಪ್ರತಿಯೊಬ್ಬ ಭಾರತೀಯರಿಗೆ ಶಿಕ್ಷಣ, ಉದ್ಯೋಗ, ವಯಸ್ಕ ಮತದಾನ, ಕಾನೂನಿನ ರಕ್ಷಣೆ ದೊರಕುವಂತೆ ಸಂವಿಧಾನ ರಚಿಸಿದ್ದಾರೆ ಎಂದು ಬೆಂಗಳೂರಿನ ಅಕ್ಕಾ ಐ.ಎ.ಎಸ್ ಸಂಚಾಲಕ ಡಾ.ಶಿವಕುಮಾರ ಹೇಳಿದರು.ಶನಿವಾರ ಸಾಯಂಕಾಲ ತಾಲೂಕಿನ ಭಿರಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ ರವರ 134ನೇ ಜಯಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಎಲ್ಲ ಮಹಿಳೆಯರಿಗೆ ಸಮಾನ ಹಕ್ಕು ದೊರಕಲು ಹಿಂದೂ ಬಿಲ್ ಕೊಡ್ ಮಂಡಿಸಿದ್ದರೂ, ಆಗಿನ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಲು ಒಪ್ಪದೆ ಇದ್ದಾಗ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದನ್ನು ಇಂದಿನ ಎಲ್ಲ ಮಹಿಳೆಯರು ತಿಳಿದುಕೊಳ್ಳಬೇಕೆಂದರು.
ಬಾಬಾಸಾಹೇಬ ಅಂಬೇಡ್ಕರ ಅವರ ಕನಸು ನನಸು ಮಾಡಬೇಕಾದರೆ ನಾವೆಲ್ಲರೂ ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಕರೆ ನೀಡಿದರು.ಯಮಕನಮರಡಿ ಹುನಸಿಕೊಳ್ಳ ಮಠದ ಸಿದ್ಧಬಸವ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೃಷ್ಣಾ ಗಸ್ತೆ ಸಂವಿಧಾನ ಪೀಠಿಕೆ ಬೋಧನೆ ಮಾಡಿದರು.ಪಿಡಿಒ ವಿದ್ಯಾನಂದ ಬಾನೆ, ಗ್ರಾ.ಪಂ.ಸದಸ್ಯರಾದ ಸಿದ್ರಾಮ ಗಸ್ತೆ, ನಿರ್ಮಲಾ ಕಾಂಬಳೆ, ಕುಮಾರ ದುರ್ಗನ್ನವರ, ಮಹೇಶ ಗಸ್ತೆ, ಕೃಷ್ಣಾ ಗಸ್ತೆ, ಮಹಾದೇವ ಈಟೇಕರಿ, ಸುರೇಶ ದೇವರುಷಿ, ರಮೇಶ ಕಾಂಬಳೆ, ಮಹಾಂತೇಶ ಕಾಂಬಳೆ, ಹಣಮಂತ ಕಾಂಬಳೆ, ಲಕ್ಷ್ಮಣ ಕಾಂಬಳೆ, ಮಧುಕರ ಕಾಂಬಳೆ, ವಿವೇಕಾನಂದ ಭೋಸಲೆ, ಶೇಖರ್ ಕಾಂಬಳೆಸೇರಿ ಅನೇಕರು ಇದ್ದರು.ಸಿಕಂದರ್ ಕಾಂಬಳೆ ಸ್ವಾಗತಿಸಿ, ನಿರೂಪಿಸಿದರು.