ಮದಗಾನೂರ ಗ್ರಾಮದಲ್ಲಿ ಡಾ ಬಿ.ಆರ್‌. ಅಂಬೇಡ್ಕರ್ ಜಯಂತಿ - ಸಿಎಂ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ

Dr. B.R. Ambedkar Jayanti in Madaganur village - CM Medal awardee police officers felicitated

ಲೋಕದರ್ಶನ ವರದಿ 

ಮದಗಾನೂರ ಗ್ರಾಮದಲ್ಲಿ ಡಾ ಬಿ.ಆರ್‌. ಅಂಬೇಡ್ಕರ್ ಜಯಂತಿ - ಸಿಎಂ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ 



ಗದಗ 27 : ತಾಲ್ಲೂಕಿನ ಮದಗಾನೂರ ಗ್ರಾಮದಲ್ಲಿ ಮಹಾತ್ಮಾ ಗೌತಮ ಬುದ್ಧ ,ಜಗಜ್ಯೋತಿ ಬಸವೇಶ್ವರರ ಜಯಂತಿಯೊಂದಿಗೆ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್'ರವರ 134ನೇ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ಗದಗ ಗ್ರಾಮೀಣ ಠಾಣೆಯ ಸಿಪಿಐ ಸಿದ್ಧರಾಮೇಶ್ವರ ಗಡೇದ, ಪಿಎಸ್ ಐ ಲಾಲಸಾಬ್ ಜೂಲಕಟ್ಟಿ, ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಬಸವರಾಜ ಗುಡ್ಲಾನೂರ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಸಮಾಜ ಸೇವಕ ನಾಗೇಶ ಕಿತ್ತೂರ ಅವರನ್ನು ಸಹ ಗೌರವಿಸಲಾಯಿತು. 



ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮುಖಂಡ ಉಮೇಶಗೌಡ ಪಾಟೀಲ ಡಾ. ಬಿ ಆರ್ ಅಂಬೇಡ್ಕರ್ ರವರು ಶಿಕ್ಷಣ,ಸಂಘಟನೆ,ಹೋರಾಟದ ತ್ರಿಸೂತ್ರಗಳನ್ನು ನೀಡುವ ಮೂಲಕ ಶೋಷಿತರನ್ನು, ನೊಂದವರನ್ನು ಅಭಿವೃದ್ದಿಪಡಿಸುವ ಕನಸು ಕಂಡಿದ್ದರು. ಅಸ್ಪೃಷ್ಯತೆ ತೊಲಗಿಸಿ ಮನುಷ್ಯತ್ವ ನಿರ್ಮಿಸುವ ಕೆಲಸ ಮಾಡಿದ್ದು ಅವರಿಗೆ ಸಮಾನವಾದ ವ್ಯಕ್ತಿ ಯಾರು ಇಲ್ಲ ಎಂದರು. 


ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರವೀಣ ಯಾವಗಲ್ ಅವರು ಮಹಾಮಾನವತವಾದಿಯ ವಿಚಾರಗಳನ್ನು ಮದಗಾನೂರ ಗ್ರಾಮದಲ್ಲಿ ಉತ್ತಮ ವೇದಿಕೆಯಲ್ಲಿ ಚರ್ಚೆಯಾಗುವಂತೆ ಮಾಡಿದ್ದು ಸಂತಸ ಎಂದರು.  

ಜಿಲ್ಲಾ ಕಾಂಗ್ರೆಸ್ ಎಸ್ಸಿ ಮೋರ್ಚಾ ಅಧ್ಯಕ್ಷ  ಬಸವರಾಜ ಕಡೇಮನಿ ಮಾತಾನಾಡಿ, ಕೇವಲ ದಲಿತ ಸಂಘಟನೆಗಳು ಮಾತ್ರವಲ್ಲದೇ ಈಡೀ ಊರಿನ ಜನರು ಸೇರಿ ಮಹಾತ್ಮಾ ತ್ರಯರ ಜಯಂತ್ಯೋತ್ಸವ ಮಾಡಿರುವುದು ಉತ್ತಮ ವಿಚಾರವಾಗಿದೆ. ಹಳ್ಳಿಮಟ್ಟದಲ್ಲಿ ಎಲ್ಲರು ಏಕತೆಯಿಂದ ಈ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಎಂದರು. 


ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದ ಪತ್ರಕರ್ತ ಆನಂದಯ್ಯ ವಿರಕ್ತಮಠ ಡಾ ಬಿ.ಆರ್ ಅಂಬೇಡ್ಕರ್ ಅವರು ನೀಡಿದ ಶೈಕ್ಷಣಿಕ,ಸಾಮಾಜಿಕ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಸ್ಥಾನಕ್ಕೆರಬೇಕು ಎಂದರು. 

 ಗ್ರಾ.ಪಂ ಸದಸ್ಯ ಮಂಜುನಾಥ ಮೂಲಿಮನಿ ಅಧ್ಯಕ್ಷೀಯ ಭಾಷಣ ಮಾಡುತ್ತಾ  ಬರುವ ದಿನಮಾನಗಳಲ್ಲಿ ದಲಿತ ಬಂಧುಗಳು ಶಿಕ್ಷಣದ ಮಹತ್ವ ಅರಿತು ಯಾವುದೇ ಆಮಿಷಗಳಿಗೆ ಬಲಿಯಾಗಿ ಚಟಕ್ಕೆ ದಾಸರಾಗಬಾರದು.ಈ ಮೂಲಕ ಮತ್ತಷ್ಟು ಮಗದಷ್ಟು ದಲಿತ ಸಮುದಾಯ ಅಭಿವೃದ್ಧಿ ಆಗುವ ಮೂಲಕ ಅಂಬೇಡ್ಕರ್ ಆಶೋತ್ತರಗಳನ್ನು ಪೂರೈಸಬೇಕು ಎಂದರು. 


ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಸಂತ ಮೇಟಿ, ಪ್ರದೀಪ ನೀಲಗುಂದ,ಮುತ್ತು ಬಿಳೆಯಲಿ,ಗೂಳಪ್ಪ ಬೀರಣ್ಣ,ಪದ್ಮಾವತಿ ರಜಪೂತ,ಹನುಮವ್ವ ಬಾರಕೇರ,ಆನಂದ ಸಿಂಗಾಡಿ,ರುದ್ರಗೌಡ ಪಾಟೀಲ,ಸಂಗನಗೌಡ ಪಾಟೀಲ, ಸಂಗನಗೌಡ ಅಕ್ಕನಗೌಡ್ರ, ಹಕ್ಕುಗಳನ್ನು, ವಸಂತರೆಡ್ಡಿ, ಗುಳಗುಂದಿ, ಜಯಶ್ರೀ,ವೆಂ. ಶಿಂಪರ್, ರುದ್ರಗೌಡ, ಪ್ರ ಪಾಟೀಲ,ಎನ್ ಸಿದ್ಧನಗೌಡ ಪಾಟೀಲ ಶೇಠ್,ಕೆ.ಡಿ ಇಬ್ರಾಹಿಮಪುರ,  

ಸೇರಿದಂತೆ  ಮದಗಾನೂರ ಗ್ರಾಮದ ಯುವಕರು, ಗುರು-ಹಿರಿಯರು ತಾಯಂದಿರು ಉಪಸ್ಥಿತರಿದ್ದರು. ಷರೀಪ ಬಳೆಯಲಿ ಹಾಗೂ ಕಲಾ ತಂಡದವರು ಕ್ರಾಂತೀಗೀತೆ ಮೊಳಗಿಸಿದರು, ಶಿವಾನಂದ ನೀರಲಗಿ ನಿರೂಪಿಸಿದರು.