ಮೃತ ಯೋಧನ ಕುಟುಂಬಕ್ಕೆ ಡಾ. ಪ್ರಭುಗೌಡ ಲಿಂಗದಳ್ಳಿ ಸಾಂತ್ವನ
ತಾಳಿಕೋಟಿ 04: ತಾಲೂಕಿನ ಬಳಗಾನೂರ ಗ್ರಾಮದ ನಿವಾಸಿಯಾದ ಬಿಎಸ್ಎಫ್ ಯೋಧ ಸಿದ್ದಣ್ಣ ಮಾದರ ಅರಳಿಕಟ್ಟಿ ಇವರು ಹರಿಯಾಣ ರಾಜ್ಯದ ಅಗರ್ತಲಾದಲ್ಲಿ ಸೇವಾ ನಿರತರಾದ ಸಮಯದಲ್ಲಿಯೇ ಗುರುವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಇವರು ರವಿವಾರ ಮೃತ ಯೋಧನ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ತಿಳಿಸಿದರು.
ಡಾ.ಪ್ರಭುಗೌಡರು ಮಾತನಾಡಿ ಗಡಿ ರಕ್ಷಣೆಗೆ ನಿಂತ ಮೃತ ಯೋಧ ಸಿದ್ದಣ್ಣ ಅರಳಿಕಟ್ಟಿ ಅವರ ಅಕಾಲಿಕ ನಿಧನವು ತುಂಬಲಾರದ ನಷ್ಟವಾಗಿದ್ದು ಇದನ್ನು ಸಹಿಸುವ ಶಕ್ತಿ ಅವರ ಪತ್ನಿ ಹಾಗೂ ಕುಟುಂಬದ ಸದಸ್ಯರಿಗೆ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು. ಮೃತ ಯೋಧನ ಧರ್ಮಪತ್ನಿ ಕವಿತಾ ಮಾದರ, ಪುತ್ರ ರವಿಕಾಂತ ಮಾದರ, ಪುತ್ರಿ ಡಾ.ಸುಮಿತಾ, ಕುಟುಂಬದ ಸದಸ್ಯರು ಗ್ರಾಮದ ಗಣ್ಯರು ಹಿರಿಯರು ಉಪಸ್ಥಿತರಿದ್ದರು