ಡಾ.ಎಚ್.ಬಿ. ರಾಜಶೇಖರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಲೋಕದರ್ಶನ ವರದಿ

ಬೆಳಗಾವಿ,31: ಯುಎಸ್ಎಂ-ಕೆಎಲ್ಇ ಅಂತರಾಷ್ಟ್ರೀಯ ವೈದ್ಯಕೀಯ ಕಾರ್ಯಕ್ರಮದ ನಿದರ್ೇಶಕರಾದ ಡಾ.ಎಚ್.ಬಿ.ರಾಜಶೇಖರ ಅವರಿಗೆ 'ಜೀವಮಾನ ಸಾಧನೆ ಪ್ರಶಸ್ತಿ' ಲಭಿಸಿದೆ. ಅವರು ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯರಾಗಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ, ಇತ್ತೀಚಿಗೆ ಬೆಂಗಳೂರಿನಲ್ಲಿ ಎಪಿಐ ಕನರ್ಾಟಕ ಚಾಪ್ಟರ್ನವರು ಆಯೋಜಿಸಿಸದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕೆಎಲ್ಇ ಜವಾರಹಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಶ್ರೇಷ್ಠ ಪ್ರಾಧ್ಯಾಪಕರಾಗಿ ಸೇವೆಸಲ್ಲಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯ ತಜ್ಞ ವೈದ್ಯರಾಗಿ, ಆರೋಗ್ಯ ಸೇವೆ ನೀಡಿರುವುದು ಗಮನಾರ್ಹ ದಾಖಲೆ.

ವೈದ್ಯಕೀಯ  ಶಿಕ್ಷಣ ಕ್ಷೇತ್ರದಲ್ಲಿ ಭೀಷ್ಮರೆಂದು ಗುರುತಿಸಲ್ಪಡುವ ಡಾ.ಎಚ್.ಬಿ.ರಾಜಶೇಖರ ಅವರಿಗೆ ಪ್ರತಿಷ್ಠಿತ ಡಾ.ಬಿ.ಸಿ.ರಾಯ್ ಪ್ರಶಸ್ತಿ ಹಾಗೂ 1991ರಲ್ಲಿ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದೆ. ಈಗ ಶ್ರೀಯುತರು ಯುಎಸ್ಎಂ-ಕೆಎಲ್ಇ ಅಂತರಾಷ್ಟ್ರೀಯ ವೈದ್ಯಕೀಯ ಕಾರ್ಯಕ್ರಮದ ನಿದರ್ೇಶಕರಾಗಿ ಹಾಗೂ ಬೆಳಗಾವಿಯ ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷರಾಗಿ ಕಳೆದ 10 ವರ್ಷಗಳಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಇತರರಿಗೆ ಮಾದರಿಯಾಗಿದ್ದಾರೆ.ಕೆಎಲ್ಇ ಸಂಸ್ಥೆಯ ಕಾಯರ್ಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆಯವರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಡಾ.ಎಚ್.ಬಿ.ರಾಜಶೇಖರ ಅವರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.