ರಷ್ಯಾದ ಕಮ್ಚಟ್ಕಾ ದ್ವೀಪದ ಬಳಿ ಭೂಕಂಪನ

(ಸ್ಪುಟ್ನಿಕ್)  ಡಿಸೆಂಬರ್, 26 ರಷ್ಯಾದ  ಪೂರ್ವದ ಕಮ್ಚಟ್ಕಾ ಪರ್ಯಾಯ ಕರಾವಳಿಯಲ್ಲಿ ಗುರುವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಷ್ಯಾದ ಅಕಾಡೆಮಿಯ   ಪ್ರಾದೇಶಿಕ ಶಾಖೆ ತಿಳಿಸಿದೆ. “ಭೂಕಂಪ ಕೇಂದ್ರ ಬಿಂದು ವಸಾಹತುವಿನಿಂದ ದಕ್ಷಿಣಕ್ಕೆ 76 ಕಿಲೋಮೀಟರ್ ದೂರದ 23 ಕಿಲೋಮೀಟರ್ ಆಳದಲ್ಲಿ ದಾಖಲಾಗಿತ್ತು ಎಂದು ಜಿಎಸ್ ಆರ್ಎಎಸ್ ವಕ್ತಾರರು ತಿಳಿಸಿದ್ದಾರೆ.ಪ್ರಸ್ತುತ ಮಾಹಿತಿಯ ಪ್ರಕಾರ, ಸ್ಥಳೀಯ ನಿವಾಸಿಗಳಿಗೆ ಭೂಮಿ ನಡುಗಿದ ಯಾವ ಅನುಭವವಾಗಿಲ್ಲ ಕಂಪನದಿಂದ  ಹಾನಿ ಅಥವಾ ಸಾವು-ನೋವು ಸಂಭವಿಸಿಲ್ಲ, ಯಾವುದೇ ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿಲ್ಲ .ಕಮ್ಚಟ್ಕಾವು ಭೂಕಂಪನದಿಂದ ಸಕ್ರೀಯ  ವಲಯದಲ್ಲಿ ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತಿದ್ದು ಮೇಲಿಂದ ಮೇಲೆ ಇಲ್ಲಿ  ಭೂಕಂಪನ ಆಗುತ್ತಿರುತ್ತದೆ.ಎಂದು ವರದಿ ಹೇಳಿದೆ.