ಜ್ಞಾನ ಸಂಪಾಧನೆಗೆ ಶಿಕ್ಷಣ ಅಗತ್ಯ: ಸಂಗನಬಸವ ಶ್ರೀಗಳು
ಶಿಗ್ಗಾವಿ 01: ಜ್ಞಾನ ಸಂಪಾಧನೆಗೆ ಶಿಕ್ಷಣ ಪಡೆಯಬೇಕು ಕೇವಲ ನೌಕರಿಗಾಗಿ ಅಲ್ಲಾ, ನಾವು ಸಂಪಾದಿಸಿದ ವಿದ್ಯಯಿಂದಾಗಿ ಹೊಸ ಪೀಳಿಗೆಗೆ ಅನುಕೂಲವಾಗಬೇಕು ಎಂದು ವಿರಕ್ತಮಠದ ಸಂಗನಬಸವ ಶ್ರೀಗಳು ಹೇಳಿದರು. ತಾಲೂಕಿನ ಕುನ್ನೂರು ಗ್ರಾಮದಲ್ಲಿ ಶ್ರೀ ಕರಿಯಮ್ಮದೇವಿ ಮೂರ್ತಿ ಪ್ರಾಣ ಪ್ರತಿಸ್ಟಾಪನೆ ಮತ್ತು ಜಾತ್ರಾ ಮಹೋತ್ಸವ ಎರಡನೇ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಜಾತಿಯನ್ನು ತೊಲಗಿಸಿದ ಬಸವಾದಿ ಶರಣರು ಹೇಳಿದ್ದು ಒಂದೇ ಕಲ್ಲು ದೇವರು ದೇವರಲ್ಲ, ಮೊದಲು ನಮಗೆ ಜನ್ಮ ನೀಡಿದ ತಂದೆ ತಾಯಿಗಳೇ ನಿಜವಾದ ದೇವರು. ತಂದೆ ತಾಯಿಗಳನ್ನು ಗೌರವದಿಂದ ನೋಡಿಕೊಳ್ಳಿ ಎಂದರು. ಶಿಕ್ಷಕ ಮಂಜುನಾಥ ಕಮ್ಮಾರ ಮಾತನಾಡಿ ನಮ್ಮ ಮಕ್ಕಳೊಂದಿಗೆ ಪೋಷಕರಾಗಿ ನಾವು ಸಮಯ ಕಳೆಯಬೇಕು, ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ಗಮನವಿಡಬೇಕು, ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ ಹಾಗಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದರು. ವೇ.ಮೂ.ಸೋಮಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು, ಈ ಸಂದರ್ಭದಲ್ಲಿ ನಿಂಗಪ್ಪ ದೊಡ್ಡಮನಿ, ಶ್ರೀಕಾಂತ ಅಂಗಡಿ, ಬಾಹುಬಲಿ ಅಂಗಡಿ,ಡಿ ಆರ್ ಬೊಮ್ಮನಳ್ಳಿ, ಕಿರಣ ಪಾಟೀಲ, ಸುರೇಶಗೌಡ ಪಾಟೀಲ, ಲಕ್ಷ್ಮಣ ಮಾಳೋಜನವರ, ಮಾಬೂಸಾಬ ಜಿಗಳೂರ, ಬಸವರಾಜ ಬೂದಿಹಾಳ, ಮುದಕಯ್ಯಸ್ವಾಮಿ ಹಿರೇಮಠ, ಈರ್ಪ ಸೊಗಲಿ, ಶಾಂತಪ್ಪ ಮತ್ತಿಗಟ್ಟಿ, ವೀರಭದ್ರ್ಪ ಶಾಡಂಬಿ, ಬಾಬುಲಾಲ ತಡಸ ಸೇರಿದಂತೆ ಇತರರಿದ್ದರು. ದೀಪಾ ಮಮದಾಪುರ ಸ್ವಾಗತಿಸಿದರು, ಪತ್ರಕರ್ತ ಶಿವಾನಂದ ದೊಡ್ಡಮನಿ ವಂದಿಸಿದರು.ಶಿಕ್ಷಕ ವಿರೂಪಾಕ್ಷಪ್ಪ ಮತ್ತಿಗಟ್ಟಿ ಕಾರ್ಯಕ್ರಮ ನಿರೂಪಿಸಿದರು.