ಭಕ್ತಿ ವಿಶಿಷ್ಟತೆ ಜಗತ್ತಿಗೆ ಸಾರಿದ ಧರ್ಮ ಸುಧಾರಕ

A religious reformer who spread the uniqueness of devotion to the world

ಧಾರವಾಡ 05: ಪ್ರಜಾಪ್ರಭುತ್ವದ ಬೀಜವನ್ನು ಬಿತ್ತಿದ ನಾಯಕ ಬಸವೇಶ್ವರ. ಭಕ್ತಿ ವಿಶಿಷ್ಟತೆಯನ್ನು ಜಗತ್ತಿಗೆ ಸಾರಿದ ಧರ್ಮ ಸುಧಾರಕ, ಮಹಾನ್ ಮಾನವತಾವಾದಿ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು. 

ಜೆ.ಎಸ್‌. ಎಸ್ . ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.  

ಬಸವೇಶ್ವರರು ಧಾರ್ಮಿಕ ಸಂಪ್ರದಾಯ, ಮೂಢನಂಬಿಕೆ ಇವುಗಳನ್ನು ತೊಡೆದು ಹಾಕಲು ಪ್ರಯತ್ನಿಸಿ ಸಮಾಜದಲ್ಲಿ ಸಮಾನತೆ, ಭ್ರಾತತ್ವ, ಸ್ತ್ರೀ ಸಬಲೀಕರಣ ವಿಚಾರಗಳನ್ನು ಎತ್ತಿ ಹಿಡಿದರು. 12 ನೇ ಶತಮಾನದಲ್ಲಿ ಸಾಂಪ್ರದಾಯಸ್ಥ ಸಮಾಜವನ್ನು ಪರಿವರ್ತನೆಗೊಳಿಸಲು ಪ್ರಯತ್ನಿಸಿ ಭಕ್ತಿಯನ್ನು ಜನರಿಗೆ ಬೋಧಿಸಿ ಮಹಾನಾಯಕ ಎಂದು ಗೌರವ ಪಡೆದರು ಎಂದು ಹೇಳಿದರು. ಮುಖ್ಯ ಅತಿಥಿ ಮಹಾಂತ ದೇಸಾಯಿ ಬಸವೇಶ್ವರರ ಜೀವನ ಕುರಿತು ಮತ್ತು ಕಾಯಕ, ದಾಸೋಹ ತತ್ವಗಳ ಕುರಿತು ತಿಳಿಸಿದರು. ವಚನಗಳ ಮೂಲಕ ಸಮಾಜಕ್ಕೆ ಸಂದೇಶ ಸಾರಿ ಸಮಾಜವನ್ನು ಸುಧಾರಿಸಲು ಪ್ರಯತ್ನಿಸಿದರು. ಅಲ್ಲದೇವ ಬಸವಣ್ಣನವರ ವಚನಗಳಲ್ಲಿ ವ್ಯಕ್ತವಾಗುವ ಮಾನವೀಯ ಅಂಶಗಳನ್ನು ತಿಳಿಸಿದರು.  

 ಡಾ. ಆರಿ​‍್ವ. ಚಿಟಗುಪ್ಪಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ ರಾಗಿಕಲ್ಲಾಪುರ, ರೋನಿಲ ಮನೋಹರ, ಎನ್‌. ಜಿ. ಪುಡಕಲಕಟ್ಟಿ, ಅವಿನಾಶ ಹೊಳಿಹೊಸುರ, ನವೀನ ಬಡಿಗೇರ, ಶಿಲ್ಪಾ ನಾಯಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.