ಅಣು ಬೋಧನೆ ಕೌಶಲ್ಯದಿಂದ ಪರಿಣಾಮಕಾರಿ ಬೋಧನೆ ಸಾಧ್ಯ: ಡಾ.ಎಂ.ಎಂ.ಬೆಳಗಲ್

Effective teaching is possible with nuclear teaching skills: Dr. M.M. Belgal

ಅಣು ಬೋಧನೆ ಕೌಶಲ್ಯದಿಂದ ಪರಿಣಾಮಕಾರಿ ಬೋಧನೆ ಸಾಧ್ಯ: ಡಾ.ಎಂ.ಎಂ.ಬೆಳಗಲ್  

ತಾಳಿಕೋಟಿ 22: ಪರಿಣಾಮಕಾರಿಯಾದ ಬೋಧನೆಯ ಕಲೆಯನ್ನು ಕರಗತ ಮಾಡಿಕೊಳ್ಳಲು ಇರುವ ಮೊದಲ ಹೆಜ್ಜೆ ಅಣುಭೋದನೆ. ಅಣುಭೋದನೆಯ ಕೌಶಲಗಳಲ್ಲಿ ಪ್ರಾವೀಣ್ಯತೆಯನ್ನು ಗಳಿಸಿಕೊಂಡ ಶಿಕ್ಷಕ ಪರಿಣಾಮಕಾರಿ ಬೋಧನೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ ಎಂದು ಸಹಾಯಕ ನಿರ್ದೇಶಕ ಪಿ.ಎಂ. ಪೋಷಣ, ತಾಲೂಕು ಪಂಚಾಯತ್ ಮುದ್ದೇಬಿಹಾಳ ಡಾ. ಎಂ.ಎಂ.ಬೆಳಗಲ್ ಹೇಳಿದರು.  

ಅವರು ಹೇಳಿದರು. ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಅಣು ಬೋಧನೆ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿ ಸೂಕ್ಷ್ಮ ಬೋಧನೆಯ ಪರಿಕಲ್ಪನೆ ಮತ್ತು ಪ್ರಕ್ರಿಯ ಕುರಿತು ವಿಸ್ತೃತ ಉಪನ್ಯಾಸ ನೀಡಿದರು.  

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಸಹಕಾರ್ಯದರ್ಶಿ ಮಾತನಾಡಿ ಸರಳ ಕಾರ್ಯಗಳನ್ನು ಸುಧಾರಿಸುವ ಮೂಲಕ ಶಿಕ್ಷಕರು ತಮ್ಮ ಬೋಧನಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡುವ ಪ್ರಸ್ತುತ ಜನಪ್ರಿಯ ಬೋಧನಾ ಪದ್ಧತಿಯನ್ನು ಅಣುಭೋದನೆ ಯಾಗಿದೆ ಎಂದರು.  

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ.ಆರ್‌.ಎಂ. ಬಂಟನೂರ ಅವರು ಆಧುನಿಕ ತಂತ್ರಜ್ಞಾನದ ಕೌಶಲ್ಯಗಳೊಂದಿಗೆ ಶಿಕ್ಷಕ ಅರ್ಜಿಸಿಕೊಳ್ಳಬೇಕಾದ ಸೂಕ್ಷ್ಮ ಬೋಧನಾ ಕೌಶಲ್ಯಗಳ ಪ್ರಾವೀಣ್ಯತೆ ಗಳಿಸಿಕೊಂಡು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಸಕ್ರಿಯವಾಗಿ ಸೃಜನಾತ್ಮಕವಾಗಿ ರೂಪಿಸುವ ಸಾಮರ್ಥ್ಯ ಹೊಂದಲು ಸಹಾಯಕವಾಗುತ್ತದೆ ಎಂದು ಹೇಳಿದರು.   

ವೇದಿಕೆಯಲ್ಲಿ ಐಕ್ಯೂಏಸಿ ಸಂಚಾಲಕ ಯು.ಎನ್‌. ಮಂಗೊಂಡ, ಅಣುಭೋದನಾ ಕಾರ್ಯಗಾರ ಸಂಘಟಕ ಎಸ್‌.ಪಿ. ಬಡಿಗೇರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿವರ್ಗ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಪ್ರಾರ್ಥನೆ ಪಾರ್ವತಿ ಹಾಗೂ ಸಂಗಡಿಗರು ಹಾಡಿದರು. ಕೀರ್ತಿ ಹಂದ್ರಾಳ ಸ್ವಾಗತಿಸಿದರು. ಕುಮಾರಿ ಅನ್ನಪೂರ್ಣ ಬಡಿಗೇರ ವಂದಿಸಿದರು. ರೂಪಾ ಕಾಖಂಡಕಿ ನಿರೂಪಿಸಿದರು.