ಸಂಗೀತಾಭಿಮಾನಿಗಳನ್ನು ರಂಜಿಸಿದ ಎಕ್ ಪ್ಯಾರ್ ಕಾ ನಗಮಾ ಹೈ

Ek Pyaar Ka Nagma Hai entertained music fans

ಕಿಕ್ಕಿರಿದು ತುಂಬಿದ ಸಭಾಗೃಹ * ಸುಮಧುರ ಹಾಡು, ಚಪ್ಪಾಳೆ ಸಿಳ್ಳೆಗಳ ಅಬ್ಬರ* ಮೂರು ಗಂಟೆಗಳ ಕಾಲ ಸಂಭ್ರಮಿಸಿದ ಸಂಗೀತಾಸಕ್ತರು 

ಬೆಳಗಾವಿ 2: ನಗರದ ಫ್ಯಾನ್ ಕ್ಲಬ್ ಆಫ್ ಓಲ್ಡ್‌ ಸಾಂಗ್ಸ್‌ ಮತ್ತು ನಿವೇದಾರ​‍್ಣ ಅಕಾಡೆಮಿಗಳು ಸೇರಿ ಐಎಂಇಆರ್ ಸಭಾಗೃಹದಲ್ಲಿ ಇದೇ ದಿ. 31 ಶನಿವಾರದಂದು ಏರಿ​‍್ಡಸಿದ್ದ ಎಕ್ ಪ್ಯಾರ್ ಕಾ ನಗಮಾ ಹೈ ಕಾರ್ಯಕ್ರಮ. ಸರಿಯಾಗಿ 5.30 ಕ್ಕೆ ಪ್ರಾರಂಭವಾಗಿ 8.30 ಕ್ಕೆ ಮುಗಿಯಿತು. ಕಾರ್ಯಕ್ರಮದಲ್ಲಿ ಎಪ್ಪತ್ತರ ದಶಕದ ಹಿಟ್ ಸಾಂಗ್‌ಗಳನ್ನು ಪ್ರಸ್ತುತಪಡಿಸಲಾಯಿತು.  

ಲತಾ ಮಂಗೇಶ್ಕರ್, ಆಶಾ ಭೋಸಲೆ, ಮಹ್ಮದ ರಫಿ, ಮನ್ನಾಡೆ, ಕಿಶೋರಕುಮಾರ, ಮಹೇಂದ್ರಕಪೂರ ಮೊದಲಾದ ಗಾಯಕರು ಹಾಡಿರುವ ಎಸ್‌. ಡಿ. ಬರ್ಮನ್, ಆರ್‌. ಡಿ. ಬರ್ಮನ್, ಲಕ್ಷ್ಮಿಕಾಂತ ಪ್ಯಾರೆಲಾಲ್, ಶಂಕರ ಜೈಕಿಶನ್, ತಲತ್ ಮಹಮ್ಮೂದ ಮೊದಲಾದ ಸಂಗೀತ ನಿರ್ದೇಶಕರು, ಗುಲ್ಜಾರ್, ಬಸು ಚಟರ್ಜಿ, ಹೃಷಿಕೇಶ್ ಮುಖರ್ಜಿ, ಚೇತನ ಆನಂದ್, ಗುರುದತ್, ಭಿ. ಆರ್‌. ಚೋಪ್ರಾ ಮೊದಲಾದ ನಿರ್ದೇಶಕರು, ಅಮಿತಾಬ್, ಜಯಾ ಬಾಧುರಿ, ಸಾಧನಾ, ಮನೋಜಕುಮಾರ, ಆಶಾ ಪಾರೇಖ್, ರಾಜಕಪೂರ್, ದೇವಾನಂದ, ಧರ್ಮೇಂದ್ರ, ಹೇಮಾಮಾಲಿನಿ ಮೊದಲಾದ ನಟನಟಿಯರು ನಟಿಸಿರುವ ಸಾಹಿರ್ ಲುಧಿಯಾನವಿ, ಹಸ್ರತ್ ಜೈಪುರಿ, ಮೊದಲಾದ ಚಿತ್ರ ಸಾಹಿತಿ ಕವಿಗಳು ರಚಿಸಿರುವ ಸುಮಾರು 20ಕ್ಕೂ ಹೆಚ್ಚು ಹಾಡುಗಳ ಅಪರೂಪದ ಕಾರ್ಯಕ್ರಮ ಇದಾಗಿತ್ತು.  

ಕಾರ್ಯಕ್ರಮದ ಗಾಯಕ ಗಾಯಕಿಯರಲ್ಲಿ ಮಕ್ಕಳಿಂದ ಅರವತ್ತರ ನಂತರದ ವಯಸ್ಸಿನವರೂ ಇದ್ದು ಎಲ್ಲರೂ ಅತ್ಯಂತ ಉತ್ಸಾಹದಿಂದ ಹಾಡಿ ಜನರನ್ನು ಮೂರು ಗಂಟೆಗಳ ಕಾಲ ಕದಲದಂತೆ ತಡೆ ಹಿಡಿದಿದ್ದರು. ರಂಗಕರ್ಮಿ ಡಾ. ಅರವಿಂದ ಕುಲಕರ್ಣಿಯವರ ಹಿಂದಿ ಭಾಷೆಯಲ್ಲಿದ್ದ ನಿರೂಪಣೆ ಸೊಗಸಾಗಿದ್ದು ಶ್ರೀಲಂಕಾ ಆಕಾಶವಾಣಿ ಕೇಂದ್ರದ ಅಮೀನ್ ಸಯಾನಿ ನೆನಪನ್ನು ತಂದಿತು. ನಿವೇದಾರ​‍್ಣ ಅಕಾಡೆಮಿಯ ಚಂದ್ರಶೇಖರ ನವಲಗುಂದ ಅವರು ಎಲ್ಲ ಕಲಾವಿದರಿಗೂ ನೆನಪಿನ ಕಾಣಿಕೆಯಿತ್ತರು.   

ಎಲ್ಲ ಹಾಡುಗಳು ಕೇಳುಗರ ಗಮನ ಸೆಳೆದವು. ಕೇಳುಗರು ಒನ್ಸಮೋರ್ ಎಂದು ದೊಡ್ಡ ಧ್ವನಿಯಲ್ಲಿ ಕೂಗಲು ಪ್ರಾರಂಭಿಸಿದಾಗ ಕೆಲ ಹಾಡುಗಳನ್ನು ಕೊನೆಯ ಒಂದು ನುಡಿ ಪ್ರಸ್ತುತ ಪಡಿಸಿದರು. ಹೆಚ್ಚಿನ ಹಾಡುಗಳು ಮತ್ತೊಮ್ಮೆ ಕೇಳಬೇಕೆಂಬ ಕೂಗಿಗೆ ಪಾತ್ರವಾದವು. ಸಮಯದ ಅಭಾವದಿಂದ ಸಂಘಟಕರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಕೊಂಡರು. ಎಸ್‌. ವಿ. ನಾಯಿಕ, ಮೇಘನಾ ಹುದ್ದಾರ, ಕಿರಣ ಕುಲಕರ್ಣಿ, ಕೃಷ್ಣಾ ಮರ್ದೂರ, ಅರ್ಚನಾ ದೇಶಪಾಂಡೆ, ಸುಜಿತ ಜೋಶಿ, ಜ್ಯೋತಿ ಕಡ್ಲಾಸ್ಕರ, ವೃಷಾಲಿ ಮರಾಠೆ, ಅನುರಾಧಾ ಕುಲಕರ್ಣಿ ಹಾಡಿದರು.  

ಭರತ ದೇಶಪಾಂಡೆ ಮತ್ತು ಕಿರಣ ಕುಲಕರ್ಣಿ ದಂಪತಿಗಳು ನೆನಪಿನ ಕಾಣಿಕೆಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು. ಕೊನೆಯಲ್ಲಿ ಮನೋಜಕುಮಾರ್ ಅವರ ಉಪಕಾರ ಚಿತ್ರದ "ಮೇರೆ ದೇಶ್ ಕಿ ಧರತಿ ಸೋನಾ ಉಗಲೇ" ಹಾಡನ್ನು ಎಲ್ಲ ಕಲಾವಿದರೂ ಸೇರಿ ಹಾಡಿ ಈಚಿನ ಸಿಂದೂರ್ ಕಾರ್ಯಾಚರಣೆಯ ಯಶಸ್ಸಿಗೆ ಕಾರಣರಾದ ಭಾರತೀಯ ಸೇನೆಗೆ ಅರ​‍್ಿಸಿದರು.