ಜರ್ನಲಿಸ್ಟ್‌ ಅಸೋಸಿಯೇಷನ್ ಸಂಘದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ

Election of office bearers at the Journalists Association meeting

ಧಾರವಾಡ 01 : ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್‌ ಸಂಘ ಅಸ್ತಿತ್ವಕ್ಕೆ ಧಾರವಾಡದಲ್ಲಿರುವ ಎಲೆಕ್ಟ್ರಾನಿಕ್ ಮಾದ್ಯಮದ ಸಹೋದ್ಯೋಗಿಗಳನ್ನು ಸಂಘಟಿಸುವ ದೃಷ್ಟಿಯಿಂದ ಧಾರವಾಡ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್‌ ಅಸೋಸಿಯೇಷನ್ ಎಂಬ ಸಂಘವನ್ನು ರಚಿಸಲಾಗಿದೆ.

ಸಂಘದ ಮೊದಲನೇ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ನರಸಿಂಹಮೂರ್ತಿ ಪ್ಯಾಟಿ, ಉಪಾಧ್ಯಕ್ಷರಾಗಿ ಜಾವಿದ್ ಅಧೋನಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ವಿ. ಕಮ್ಮಾರ್, ಕಾರ್ಯದರ್ಶಿಯಾಗಿ ಪ್ರಶಾಂತ ದಿನ್ನಿ ಹಾಗೂ ಖಜಾಂಚಿಯಾಗಿ ಗುರುನಾಥ ಕಟ್ಟಿಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ಧಾರವಾಡದ ಟಿವಿ ಮಾಧ್ಯಮಗಳಿಗೆ ಸೇರಿದ ಅಧಿಕೃತ ಸಂಘವಾಗಿದೆ.